ಬಳ್ಳಾರಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ, ನಗರದ ರಾಯಲ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ವತಿಯಿಂದ ಪ್ರತಿಭಟನೆ ನಡೆಸಿತು.
ದೇಶದ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಯುವುದನ್ನು ಒಂದು ಫ್ಯಾಶನ್ ಆಗಿದೆ ಎಂಬುವ ಹೇಳಿಕೆ ಅತ್ಯಂತ ನೋವಿನ ಸಂಗತಿ ಇಂತಹ ಕ್ರೂರ ಮನಸ್ಥಿತಿಯ ವ್ಯಕ್ತಿಗಳನ್ನು ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು.
ಇಂತಹ ಮನಸ್ಥಿತಿ ಇರುವವರು ದೇಶದ ಕ್ಷಮೆ ಕೋರಿ ತೊಲಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಆ ಮೂಲಕ ಬಂದ ಪ್ರಜಾಪ್ರಭುತ್ವದ ಹಕ್ಕನ್ನು ಮೊದಲಿಂದಲೂ ಕಸಿಯುವ ಪ್ರಯತ್ನ ನಡೆಸುತ್ತಿರುವವರೇ ಕೋಮುವಾದಿ ಬಿಜೆಪಿಗರು, ಸಂಸತ್ ಭವನದಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನ ಪ್ರಸ್ತಾಪಿಸಿ ಅಪಮಾನ ಗೊಳಿಸಿರುವುದು ನಿಜವಾದ ದೇಶದ್ರೋಹಿಯ ಕೃತ್ಯ ಇಂತಹ ಕೀಳು ಮಟ್ಟದ ಅಭಿರುಚಿಯುಳ ವ್ಯಕ್ತಿಗಳು ದೇಶದ ಗೃಹ ಸಚಿವರಾಗಿರುವುದು ದೇಶದ ದುರಂತ ಇಂತಹ ವ್ಯಕ್ತಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಮನಸ್ಥಿತಿ ಇನ್ನೂ ಅತ್ಯಂತ ಹೀನಾಯ ಮನಸ್ಥಿತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು.