ಬೆಂಗಳೂರು: ಇದೇ ಜನವರಿ 23ರಂದು ಪಿಎಸ್ಐ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪುರುಷ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಏನು?
* ಪೂರ್ಣ ತೋಳಿನ ಅಂಗಿಗಳನ್ನ ಧರಿಸುವಂತಿಲ್ಲ
* ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಕಮ್ಮಿ ಇರುವ ಪ್ಯಾಂಟ್ ಧರಿಸಿರಬೇಕು
* ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್ಗಳಿಗೆ ಅನುಮತಿ ಇಲ್ಲ
* ಶರ್ಟ್ ಅಥವಾ ಪ್ಯಾಂಟ್ಗಳಿಗೆ ಜಿಪ್ ಪ್ಯಾಕೆಟ್ಗಳು, ದೊಡ್ಡ ದೊಡ್ಡ ಗುಂಡಿಗಳು, ಹೆಚ್ಚುವರಿ ಡಿಸೈನ್ ಇರಬಾರದು
* ಪರೀಕ್ಷಾ ಹಾಲ್ಗೆ ಶೂಗಳು ಕಟ್ಟು ನಿಟ್ಟಾಗಿ ನಿಷೇಧ
* ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ
* ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸುವುದು ನಿಷೇಧ
ಮಹಿಳಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಏನು?
* ದೊಡ್ಡ ದೊಡ್ಡ ಡಿಸೈನ್, ಬಟನ್ ಇರೋ, ಹೂಗಳು ಇರೋ ಬಟ್ಟೆ ಧರಿಸುವಂತಿಲ್ಲ
* ಪೂರ್ಣ ತೋಳಿನ ಬಟ್ಟೆ ಬಳಸದಂತೆ ಸೂಚನೆ
* ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆ ಬಳಸಬೇಕು
* ಇನ್ನೊಬ್ಬರಿಗೆ ಮುಜುಗರವಾಗದ ಟಾಪ್ಗಳು ಬಳಸಲು ಸೂಚನೆ
* ಹೈ ಹೀಲ್ಸ್ ಚಪ್ಪಲಿ-ಶೂಗಳನ್ನ ಧರಿಸದಂತೆ ಸೂಚನೆ
* ಮಹಿಳಾ ಅಭ್ಯರ್ಥಿಗಳಿಗೂ ಕೂಡ ಯಾವುದೇ ರೀತಿಯ ಲೋಹ, ಚೈನ್ ಬಳಸದಂತೆ ಸೂಚನೆ
* ಮಂಗಳ ಸೂತ್ರ, ಕಾಲುಂಗುರ ಬಳಸಲು ಅನುಮತಿ
ಪರೀಕ್ಷಾ ಕೊಠಡಿಗೆ ಈ ಪತ್ರಗಳು ಕಡ್ಡಾಯ:
* ಪ್ರವೇಶ ಪತ್ರ ಕಡ್ಡಾಯವಾಗಿ ತರಬೇಕು
* ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯವಾಗಿರಬೇಕು
ಎಲ್ಲರೂ ಈ ಸೂಚನೆ ಪಾಲಿಸಬೇಕು:
ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲರೂ ಪಾಲಿಸುವ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅಲ್ಲದೇ ಎಲ್ಲಾ ಅಭ್ಯರ್ಥಿಗಳಿಗೂ ಈ ಕೆಳಗಿನ ವಸ್ತುಗಳು ಬಳಸದಂತೆ ಸೂಚನೆ ನೀಡಲಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರಗಳನ್ನು ಪರೀಕ್ಷಾ ಹಾಲ್ಗೆ ಕೊಂಡೊಯ್ಯುವಂತಿಲ್ಲ