ಬೆಂಗಳೂರು ಗ್ರಾಮಾಂತರ: ಪಿಎಸ್ಐ ಪತ್ನಿ ಶಿಲ್ಪಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಇಂದು ಬೇಗೂರು ಪೊಲೀಸ್ ಠಾಣೆ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು ಅಲ್ಲದೆ ಪೋಲಿಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವರಾಗಿದ್ದಾರೆ..
ಹೌದು ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಲೇಔಟ್ ನಲ್ಲಿ ಪಿಎಸ್ಐ ರಮೇಶ್ ಪತ್ನಿ ಶಿಲ್ಪ ಜೂನ್ 3ನೇ ತಾರೀಕಿನಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು.
ಕುಟುಂಬಸ್ಥರು ಇದೊಂದು ಮರ್ಯಾದೆ ಅತ್ಯೆ ಅಂತ ಆರೋಪ ಸಹ ಮಾಡಿದ್ರು ಇನ್ನು ಬಾಗೇಪಲ್ಲಿ ಮೂಲದ ರಮೇಶ್ ಚಿಂತಾಮಣಿ ಮೂಲದ ಶಿಲ್ಪವನ್ನು ಕಾಲೇಜಿನಲ್ಲಿ ಓದುವಾಗ ಪ್ರೀತಿಸಿದ್ದು ಅದಾದ ಬಳಿಕ ಬೆಂಗಳೂರಿಗೆ ಶಿಲ್ಪಾ ಬಿ ಎಡ್ ಮಾಡುವಾಗ ರಮೇಶ್ ಪ್ರಬೋಷನರಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕೆಲಸ ನಿರ್ವಹಿಸುವಾಗ ಕುಟುಂಬದ ವಿರೋಧದ ನಡುವೆಯೂ ಪೊಲೀಸರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆ ಸಹ ಮಾಡಿಕೊಟ್ಟಿದ್ದರು
ಅದೀಗ ಜೂನ್ 3 ನೇ ತಾರೀಕು ಅನುಮಾನ್ಪದ ರೀತಿಯಲ್ಲಿ ಸಾವನಪ್ಪಿದ್ದರು. ಯುವತಿಯ ಪೋಷಕರು ಪಿ ಎಸ್ ಐ ರಮೇಶ್ ವಿರುದ್ಧ ಕಿರುಕುಳ ಜಾತಿ ನಿಂದನೆ ಮರ್ಯಾದೆ ಹತ್ಯೆ ಸೇರಿದಂತೆ ರಮೇಶ್ ಕುಟುಂಬದ 7 ಜನರ ಮೇಲೆ ದೂರು ನೀಡಿದ್ರು ಆದರೆ ಪಿಎಸ್ಐ ರಮೇಶನನ್ನ ಒಂದು ತಿಂಗಳ ಆದ್ರೂ ಬಂಧನ ಮಾಡದೆ ಪೊಲೀಸರು ತನಿಖೆಯನ್ನ ದಿಕ್ಕುತಪಿಸುವ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಕುಟುಂಬಸ್ಥರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮತ್ತು ಪಿಎಸ್ಐ ರಮೇಶ ನನ್ನ ಬಂಧಿಸಿ ವಿಚಾರಣೆ ಮಾಡುವಂತೆ ಈ ಪ್ರಕರಣವನ್ನು ಸಿಐಡಿ ಹಾಗೂ ಸಿಬಿಐ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಇಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು..