ಗದಗ: ಪೊಲೀಸರು ಅಂದ್ರೆ ಕೇವಲ ಕಳ್ಳರನ್ನು, ರೌಡಿಗಳನ್ನು, ದರೋಡೆಕೋರರನ್ನು ಹಿಡಿಯೋದು ಮಾತ್ರ ಅಂದುಕೊಂಡಿರೋ ಜನ್ರಿಗೆ ಈ ಪೊಲೀಸರ ಕಾರ್ಯ ಕೊಂಚ ಡಿಫರೆಂಟ್ ಆಗಿದೆ ಗದಗ ಜಿಲ್ಲೆಯ ರೋಣ ಪೊಲೀಸರು ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಸಮಾಜಮುಖಿ ಕಾರ್ಯವನ್ನ ಮಾಡಿ ರೋಣ ಜನ್ರ ಅಭಿನಂದನೆಗೆ ಪಾತ್ರರಾಗಿದ್ದಾರೆ.
ನಿರಂತರ ಮಳೆ ಹಿನ್ನೆಲೆ ರೋಣ ಪಟ್ಟಣದ ಸೂಡಿ ವೃತ್ತದ ಬಸ್ ನಿಲ್ದಾಣದ ಬಳಿ ದೊಡ್ಡ ತಗ್ಗು ಗುಂಡಿಗಳೇ ಬಿದ್ದಿದ್ವು.
ಇದ್ರಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ರು. ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿ ಶಾಪ ಹಾಕ್ತಿದ್ರು. ಎಷ್ಟೋ ದಿನವಾದ್ರೂ ಕೂಡಾ ತಗ್ಗು ಗುಂಡಿ ಮುಚ್ಚದಿರೋದನ್ನ ಗಮನಿಸಿದ ರೋಣ ಪೊಲೀಸರು ಸಿಪಿಐ ಎಸ್ ಎಸ್ ಬೀಳಗಿ ನೇತೃತ್ವದಲ್ಲಿ ಎ ಎಸ್ ಐ, ಎಸ್ ಬಿ ಪವಾಡಿ, ಪೋಲಿಸ್ ಪೇದೆ ರಮೇಶ್ ಜುಂಗೆನ್ನವರ್ ಮುರ್ರಂ ಮಣ್ಣು ಹಾಕಿ ತಗ್ಗು ಗುಂಡಿಗಳನ್ನ ಮುಚ್ಚೋ ಕೆಲಸ ಮಾಡಿದ್ದಾರೆ. ಆ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಪೊಲೀಸರ ಸಮಾಜಮುಖಿ ಕಾರ್ಯಕ್ಕೆ ಇದೀಗ ರೋಣದ ಜನ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.