ಗದಗ: ಭಾರೀ ಮಳೆಯಿಂದಾಗಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರು ಬರದಂತೆ ಮನವಿ ಮಾಡಿಕೊಂಡಿದ್ದಾರೆ. ನಿರಂತರ ಮಳೆಯಿಂದ ಕಪ್ಪತ್ತಗುಡ್ಡದ ಗುಡ್ಡಗಾಡು ಪ್ರದೇಶದಲ್ಲಿ ಟ್ರೆಕ್ಕಿಂಗ್ ನಿಷೇಧಿಸಲಾಗಿದೆ. ಮಳೆಯಿಂದಾಗಿ ಕಪ್ಪತ್ತಗುಡ್ಡದ ಮಣ್ಣು ಕುಸಿಯುತ್ತಿದೆ.
ಮಣ್ಣು ಜರಿಯುತ್ತಿರುವುದರಿಂದ ಹಾಗೂ ಗುಡ್ಡಗಾಡಿನಲ್ಲಿ ಮುಂದೆ ಸಂಭವಿಸಬಹುದಾದ ಅಪಘಾತಗಳನ್ನ ತಪ್ಪಿಸಲು ತೀರ್ಮಾನ ಮಾಡಲಾಗಿದ್ದು, ಇತ್ತೀಚೆಗೆ ಕಪ್ಪತ್ತಗುಡ್ಡಕ್ಕೆ ಹೆಚ್ಚಿನ ಜನ ಪ್ರವಾಸಿಗರ ಆಗಮನದ ಹಿನ್ನೆಲೆ ಪ್ಲಾಸ್ಟಿಕ್ ಹಾಗೂ ಶಬ್ದ ಮಾಲಿನ್ಯದಿಂದ ಕಪ್ಪತ್ರಗುಡ್ಡದ ಪರಿಸರದ ವಾತಾವರಣ ಕಲುಷಿತಗೊಂಡು ವನ್ಯಜೀವಿಗಳಿಗೆ ತೊಂದರೆಯಾಗ್ತಿದೆ. ಅನಧಿಕೃತವಾಗಿ ಕಪ್ಪತ್ರಗುಡ್ಡ ಪ್ರವೇಶ ಕಾನೂನು ಉಲ್ಲಂಘನೆ ಹಾಗೂ ಶಿಕ್ಷಾರ್ಹಪರಾಧ ಎಂದು ಸೂಚನೆ ನೀಡಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)