ಮೈಸೂರು: ಪ್ಯೂಮಾ ಶೋ ರೂಂ ನ ಶೆಟರ್ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಜ್ವಲ್(20) ಬಂಧಿತ ಆರೋಪಿ.ಬಂಧಿತನಿಂದ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ.ಎರಡು ಮೊಬೈಲ್ ಹಾಗೂ 5500/ ರೂ ನಗದು ವಶಪಡಿಸಿಕೊಂಡಿದ್ದಾರೆ.ಷೆಟರ್ ಮುರಿದು ಷೋರೂಂ ನಲ್ಲಿದ್ದ 27 ಸಾವಿರ ನಗದು ಹಾಗೂ 20 ಸಾವಿರ ಮೌಲ್ಯದ ಪಾದರಕ್ಷೆಗಳು,ಕ್ಯಾಪ್ ಹಾಗೂ ಪರ್ಸ್ ಗಳನ್ನ ಮೇ 7 ರಂದು ಪ್ರಜ್ವಲ್ ದೋಚಿ ಪರಾರಿಯಾಗಿದ್ದ. ಪ್ರ
ಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾ ಗಿದ್ದಾರೆ. ಆರೋಪಿಯು ತನ್ನ ಸಹಚರರಾದ ನಿತಿನ್,ಭಾಷಾ,ಚೇತನ್ ಎಂಬುವರ ಜೊತೆ ಸೇರಿ ಮೈಸೂರು, ಬೆಂಗಳೂರು, ಹೊಸಪೇಟೆ, ಅರಸೀಕೆರೆ ಸೇರಿದಂತೆ ವಿವಿದೆಡೆ ಇದೇ ರೀತಿ ಅಪರಾಧಗಳಲ್ಲಿ ಪಾಲ್ಗೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಡಿಸಿಪಿ ಮುತ್ತುರಾಜ್ ಪ್ರಶಂಸಿಸಿದ್ದಾರೆ.