ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಹೊಂದಿರುವ ನಾಲ್ ರೋಡ್ ಹಾಗೂ ಗರಿಕೆಕಂಡಿ ರಸ್ತೆ ಮಾರ್ಗ ಮಧ್ಯೆ ಚೆಕ್ ಪೋಸ್ಟ್ ಸಮೀಪದಲ್ಲಿ ಪುಂಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡಿ ಬೈಕ್ ಜಖಂ ಗೊಂಡಿದೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತಿದ್ದಂತಹ ಬೈಕ್ ಸವಾರರ ಮೇಲೆ ಕಾಡಾನೆ ದಾಳಿ ಮಾಡಿದ್ದು ಭಯಭೀತರಾದ ಬೈಕ್ ಸವಾರರು ತಮ್ಮ ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಂತರ ಅಕ್ಕ ಪಕ್ಕದಲ್ಲಿ ಇದ್ದಂತ ಇತರೆ ವಾಹನ ಸವಾರರು ಕೂಗಾಡಿ ಆನೆಯನ್ನು ಚದುರಿಸಿದ್ದಾರೆ.
ಇನ್ನು ವಿಷಯ ತಿಳಿದ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ ಎಂದು ತಿಳಿದುಬಂದಿದೆ