ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಮೂರು ವರ್ಷ. ಅಪ್ಪು ಅಗಲಿ ಮೂರು ವರ್ಷ ಕಳೆದರು ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲಿ ಅಜರಾಮರವಾಗಿದ್ದಾರೆ. ಪುನೀತ್ ಅವರ ಆಪ್ತ ಬಳಗದಲ್ಲಿ ಇದ್ದವರಲ್ಲಿ ಜಗ್ಗೇಶ್ ಕೂಡ ಒಬ್ಬರು. ಪುನೀತ್ ಜನಿಸಿದಾಗಿನಿಂದ ಅವರು ನಿಧನ ಹೊಂದುವವರೆಗೆ ಪುನೀತ್ ಜೊತೆಗೆ ಇದ್ದರು. ಪುನೀತ್ ಅವರನ್ನು ಪ್ರತಿ ಹಂತದಲ್ಲಿ ಕಂಡವರು. ಈಗ ಪುನೀತ್ ಬಗ್ಗೆ ಜಗ್ಗೇಶ್ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಜಗ್ಗೇಶ್ ಅವರು ಚಿತ್ರರಂಗದಲ್ಲಿ, ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಾ ಇರುತ್ತಾರೆ. ಪುನೀತ್ ಇಲ್ಲ ಎಂಬ ನೋವಿನಲ್ಲಿ ಭಾವುಕ ಸಾಲುಗಳನ್ನು ಜಗ್ಗೇಶ್ ಬರೆದಿದ್ದಾರೆ. ಈ ಸಾಲುಗಳ ಅರ್ಥವನ್ನು ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ನೀ ಮಗುವಾಗಿದ್ದಾಗ ಅಪ್ಪನ ಮಡಿಲಲ್ಲಿ ಕಂಡಿದ್ದೆ..
ಅಪ್ಪನ ಭುಜದವರೆಗೆ ಬೆಳೆದಾಗ ಅಪ್ಪನ ಪಕ್ಕದಲ್ಲಿ ಕಂಡಿದ್ದೆ..
ಮದುವೆಯಾದಾಗ ಮಡದಿಯ ಪಕ್ಕದಲ್ಲಿ ಕಂಡಿದ್ದೆ..
ನಟನಾಗಿ ಬೆಳದಾಗ ಅಭಿಮಾನಿಗಳ ಹೃದಯದಲ್ಲಿ ಕಂಡಿದ್ದೆ..
ಗೆಳೆಯನಾದಾಗ ನಿನ್ನ ನಗುವನ್ನು ಕಂಡಿದ್ದೆ..
ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ..
ಯಾವಾಗಲೂ ನಿನ್ನ ಪ್ರೀತಿಸುತ್ತೇನೆ..
ಹೀಗೆ ಅಪ್ಪು ಬಗ್ಗೆ ಜಗೇಶ್ ಬರೆದುಕೊಂಡಿದ್ದಾರೆ.