ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೂ ಮೂರು ವರ್ಷ ಕಳೆದಿದೆ. ಅಪ್ಪು ಇಲ್ಲದೆ ಕಳೆದ ಈ ಮೂರು ವರ್ಷಗಳು ಒಂದೊಂದು ಯುಗದಂತೆ ಆಗಿದೆ. ಪುನೀತ್ ರಾಜ್ ಕುಮಾರ್ ಎಂದರೆ ಪ್ರತಿಯೊಬ್ಬರಿಗೂ ವಿಶೇಷ ಪ್ರೀತಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಪುನೀತ್ ರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅಂತೆಯೇ ರಾಘವೇಂದ್ರ ರಾಜ್ ಕುಮಾರ್ ಸೊಸೆ, ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ಪುನೀತ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಪ್ಪು ಪುಣ್ಯಸ್ಮರಣೆಯಂದು ಅವರನ್ನು ಶ್ರೀದೇವಿ ಸ್ಮರಿಸಿದ್ದಾರೆ. ಅಪ್ಪು ಈ ಹಿಂದೆ ಹಾಡಿರುವ ವಿಶೇಷ ವಿಡಿಯೋ ಶೇರ್ ಮಾಡಿ, ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಕುಟುಂಬದ ಕಾರ್ಯಕ್ರಮದಲ್ಲಿ ಕವಿರತ್ನ ಕಾಳಿದಾಸ ಚಿತ್ರದ ‘ಸದಾ ಕಣ್ಣಲ್ಲಿ’ ಹಾಡನ್ನು ಅಪ್ಪು ಹಾಡಿದ್ದರು. ಅದನ್ನು ಸ್ವತಃ ಶ್ರೀದೇವಿ ಅವರು ಚಿತ್ರೀಕರಿಸಿದ್ದರು. ಆ ವಿಡಿಯೋವನ್ನು ಹಂಚಿಕೊಂಡು, ಚಿಕ್ಕಂದಿನಿಂದಲೂ ಅಪ್ಪು ಸಿನಿಮಾ ನೋಡುತ್ತಾ ಬೆಳೆದಿದ್ದೇನೆ. ಆದರೆ ಕಳೆದ 3 ವರ್ಷಗಳಿಂದ ನಾನು ಯಾವುದೇ ಚಿತ್ರವನ್ನು ನೋಡಿಲ್ಲ. ನಿಮ್ಮ ಸಿನಿಮಾಗಳಿಲ್ಲದೆ ಸಿನಿಮಾ ನೋಡುವ ಅನುಭವ ನಿಜಕ್ಕೂ ನನ್ನನ್ನು ಘಾಸಿ ಮಾಡುತ್ತಿದೆ. ಮಿಸ್ ಯೂ.. ನಿಮ್ಮ ಅಭಿಮಾನಿ ಎಂದು ಬರೆದು ಶ್ರೀದೇವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.