ಬಾಗಲಕೋಟೆ : ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದೇನೆ. ಉತ್ತರ ಕರ್ನಾಟಕದಲ್ಲಂತೂ ಎಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಮಹತ್ವ ದೊರಕುತ್ತಿದ್ದು, ಈ ಬಾರಿ ಕರ್ನಾಟಕ ರಾಜ್ಯದ ಜನತೆ ಆಪ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ತೇರದಾಳ ಕ್ಷೇತ್ರದ ಆಪ್ಅಭ್ಯರ್ಥಿ ಅರ್ಜುನ ಹಲಗಿಗೌಡರ ಪರ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು.
ಕಟ್ಟಕಡೆಯ ಮತದಾರ ಆಮ್ ಆದ್ಮಿ ಪಕ್ಷದ ವಿಶ್ವಾಸ ಹಾಗು ದೆಹಲಿಯಲ್ಲಿ ಮಾಡಿದ ಕಾರ್ಯಗಳಿಗೆ ಆಶೀರ್ವದಿಸಿ ಸರ್ಕಾರ ಮಾಡುವದರ ಜೊತೆಗೆ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ್ದಾರೆ.ಇದೇ ಮಾದರಿ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದರು.
ಸರ್ಕಾರ ರೂಪಿಸಲು ಯಾವದೇ ತಂತ್ರಗಾರಿಕೆ ಬೇಕಿಲ್ಲ. ಪ್ರಾಮಾಣಿಕ ಹಾಗು ಜನತೆಗೆ ಉದ್ಯೋಗ ಸೃಷ್ಟಿಸುವದರೊಂದಿಗೆ ರೈತರಿಗೆ ಒಳಿತಾಗುವ ಕಾರ್ಯದಲ್ಲಿ ತೊಡಗುವಲ್ಲಿ ಆಪ್ ನಿಸ್ಸೀಮವಿದೆ. ಇದೊಂದು ವಿಶ್ವಾಸದಿಂದ ಸರ್ಕಾರ ನಿಶ್ಚಿತವಾಗಿದ್ದು, ಎಲ್ಲೆಡೆ ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿದ್ದು, ಹೊಸ ಪ್ರಯೋಗದಲ್ಲಿ ವಿನೂತನ ಸಾಧನೆ ಆಪ್ ಮಾಡಲಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾನ್, ಆಪ್ನಿಂದ ಮುಖ್ಯಮಂತ್ರಿಯನ್ನಾಗಿ ಯಾರನ್ನೂ ಚುನಾವಣಾ ಮುನ್ನ ಘೋಷಿಸಿಲ್ಲ. ಬದಲಾಗಿ ಬಡವರ ಪಕ್ಷವಾಗಿರುವ ಇಲ್ಲಿ ಅತ್ಯಂತ ಸಾಮಾನ್ಯ ಹಾಗು ಕಟ್ಟಕಡೆಯ ಮನುಷ್ಯನೂ ಮುಖ್ಯಮಂತ್ರಿಯಾಗುವ ಹಕ್ಕು ಇಲ್ಲಿ ಮಾತ್ರವಿದೆ ಎಂದರು.
ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷದ ಸರ್ಕಾರ ಬಡವರಿಗೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ.
ಕರ್ನಾಟಕದಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಮ್ ಆದ್ಮಿ ಪಕ್ಷ ಪಕ್ಷದ ಶಾಸಕರನ್ನಾಗಿ ವಿಧಾನಸೌಧಕ್ಕೆ ಕರ್ನಾಟಕ ರಾಜ್ಯದ ಮತದಾರರು ಆಶೀರ್ವಾದ ಮಾಡುತ್ತಾರೆ.
ಪಂಜಾಬ ಮತ್ತು ದೆಹಲಿ ಅರವಿಂದ್ ಕ್ರೇಜಿವಾಲ ನೇತೃತ್ವದಲ್ಲಿ ಉಚಿತ ಕರೆಂಟ ಬಡವರು ಹಸಿವಿನಿಂದ ಬಳಲಬಾರದೆಂದು ಅಕ್ಕಿ. ಗೋಧಿ ಬೇಳೆ ತೊಗರಿ ಬೆಳೆ ಹೀಗೆ ಮುಂತಾದ ವಸ್ತುಗಳನ್ನ ಉಚಿತವಾಗಿ ನೀಡಿದ್ದೇವೆ.
ಕರ್ನಾಟಕದಲ್ಲೂ ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಮತ್ತು ಸರ್ಕಾರಿ ಶಾಲೆ ಉಳಿವಿಗಾಗಿ ಮತ್ತು ಹೆಚ್ಚಿನ ಸರ್ಕಾರಿ ಶಾಲೆಗಳ ಕಟ್ಟಡಗಳನ್ನ ನಿರ್ಮಿಸಿ ಉತ್ತಮ ಶಿಕ್ಷಣವನ್ನು ಕರ್ನಾಟಕದಲ್ಲಿ ನೀಡುತ್ತೇವೆ ಎಂದು ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ ಹೇಳಿದರು.
ಕರ್ನಾಟಕದಲ್ಲಿ 40% ಸರ್ಕಾರ ಬಿಜೆಪಿ ಇದೆ ಬಿಜೆಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಇದನ್ನು ಕರ್ನಾಟಕ ರಾಜ್ಯದಲ್ಲಿ ಮುಕ್ತ ಮಾಡಬೇಕಾದರೆ ಆಮ್ ಆದ್ಮಿ ಪಾರ್ಟಿ ಸರ್ಕಾರ ಅವಶ್ಯಕತೆ ಇದೆ.
ಭ್ರಷ್ಟಾಚಾರ ಮುಕ್ತಮಾಡುವ ಪಾರ್ಟಿ ಆಮ ಆದ್ಮಿ ಪಾರ್ಟಿ
ಕರ್ನಾಟಕ ಜನತೆ ಪ್ರಜ್ಞಾವಂತ ಮತದಾರರು ಇದ್ದಾರೆ ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ.ಕರ್ನಾಟಕದಲ್ಲಿ ನಿರ್ಣಾಯಕ ಪಾತ್ರ ಆಮ್ ಆದ್ಮಿ ಪಕ್ಷ ಪ್ರಮುಖ ಪಾತ್ರ ವಹಿಸಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಹೇಳಿದರು.
ಬಿಜೆಪಿ ಆಡಳಿತದಲ್ಲಿ ಬಡವರ ಕಣ್ಣೀರ ಒರೆಸುವ ಕೆಲಸ ಯಾವತ್ತೂ ಮಾಡಿಲ್ಲ. ಬಡವರ ಕಣ್ಣೀರ ತರಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಹಾಗಾಗಿ ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ