ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್ ಅನ್ನೋ ಕೂಗುಗಳು ಹೆಚ್ಚಾಗ್ತಾ ಇದೆ.. ಮೊನ್ನೆ ಮೊನ್ನೆಯಷ್ಟೇ ಕಾಲೇಜ್ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ಸುದ್ದಿಯಾಗಿದ್ರು.. ಆ ಪ್ರಕರಣ ಮಾಸುವ ಮುನ್ನವೇ ಇವತ್ತು ಮತ್ತೊಂದು ಪ್ರಕರಣ ನಡೆದಿದೆ.. ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಈ ಪ್ರಕರಣದಲ್ಲಿ ಫರ್ಜಿ ಸಿನಿಮಾದ ವೆಬ್ ಸಿರೀಸ್ ಇಂಪ್ಯಾಕ್ಟ್ ಆಗಿದೆ..ಅದು ಹೇಗೆ ಅಂತೀರಾ ಈ ವರದಿ ನೋಡಿ..
ಈತನ ಹೆಸರು ಅಂಕುಶ್.. ವೆಸ್ಟ್ ಬೆಂಗಾಲ್ ನಿವಾಸಿ.. ಬೆಂಗಳೂರಿನ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿಯೊಂದರಲ್ಲಿ ತನ್ನ ಸ್ನೇಹಿತರ ಜೊತೆ ವಾಸ ಮಾಡ್ತಾ ಇದಾನೆ. ಬಿಬಿಎಂ ಓದಿದ್ದ ಅಂಕುಶ್ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದ.. ಸ್ನೇಹಿತರ ಜೊತೆ ಪಿಜಿಯಲ್ಲಿ ವಾಸ ಮಾಡ್ತಿದ್ದ ಈತ ಸಂಜೆ ಸುದ್ದಿಯಾಗಿದ್ದಾನೆ..ಅದು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಅನ್ನೋ ವಿಚಾರಕ್ಕೆ..
ಅಕುಂಶ್ ಗೆ ಸಿನಿಮಾ ಹಾಗೂ ಸಿರೀಸ್ ನೋಡುವ ಹುಚ್ಚು ಜಾಸ್ತಿ ಇತ್ತು..ನಿನ್ನೆ ಸಂಜೆ ಕೂಡ ಅಮೇಜಾನ್ ಪ್ರೈಮ್ ನಲ್ಲಿ ಪರ್ಜಿ ಸಿನಿಮಾ ನೋಡ್ತಾ ಇದ್ದ.. ಅದರಲ್ಲಿ ” ಬಿಲಾಲ್ ಮನ್ಸೂರ್ ಚಾಯಿಯೇ ಪಾಕಿಸ್ತಾನಕ್ಕೂ ಜಾನಹೈ ” ಎಂಬ ಡೈಲಾಗ್ ಬರುತ್ತೆ.. ಆ ಡೈಲಾಗ್ ನ್ನು ಅಕುಂಶ್ ಜೋರಾಗಿ ಹೇಳಿದ್ದ.. ಇಷ್ಟೇ ನೋಡಿ ಆಗಿದ್ದು. ಅಕ್ಕ ಪಕ್ಕದ ಮನೆಯವರು ಪಾಕಿಸ್ತಾನ ಜಿಂದಾಬಾದ್ ಅಂತಿದ್ದಾನೆ ಅಂತ ಪೊಲೀಸರಿಗೆ ಹೇಳಿದ್ದಾರೆ.. ಅಲ್ಲೆ ಏರಿಯಾದಲ್ಲಿದ್ದ ಹೊಯ್ಸಳ ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ಮಾಡಿದ್ದಾರೆ..
ಸದ್ಯ ಮೈಕೋಲೇಔಟ್ ಪೊಲೀಸರು ಅಕುಂಶ್ ನನ್ನು ವಿಚಾರಣೆ ಮಾಡ್ತಾ ಇದಾರೆ.. ವಿಚಾರಣೆ ವೇಳೆ ಪರ್ಜಿ ಸಿನಿಮಾದ ಡೈಲಾಗ್ ಹೇಳಿದ್ದು ಬಿಟ್ರೆ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ.. ಒಟ್ಟಾರೆ ಫರ್ಜಿ ಸಿನಿಮಾದ ಆ ಒಂದು ಡೈಲಾಗ್ ಇವತ್ತು ಅಕುಂಶ್ ನನ್ನು ಠಾಣೆಯಲ್ಲಿ ಕೂರುವಂತೆ ಮಾಡಿದ್ದು ದುರಂತ..