ಕಳೆದ ನಾಲ್ಕು ವಾರಗಳ ಹಿಂದೆ ಆರಂಭವಾದ ಬಿಗ್ ಬಾಸ್ ಸೀಸನ್ 11 ಮೊದಲ ವಾರಕ್ಕೆ ಭರ್ಜರಿ ಟಿಆರ್ಪಿ ಕಂಡಿತ್ತು. ಆದರೆ ಇದೀಗ ಬಿಗ್ ಬಾಸ್ ಟಿಆರ್ ಪಿ ಕುಸಿದಿದೆ. ಜಗದೀಶ್ ಇದ್ದ ಕಾರಣಕ್ಕೆ ಬಿಗ್ ಬಾಸ್ಗೆ ಒಳ್ಳೆಯ ಟಿಆರ್ಪಿ ಸಿಕ್ಕಿತ್ತು ಎಂಬುದು ಕೆಲವರ ಅಭಿಪ್ರಾಯ. ಇದರ ಜೊತೆಗೆ ಈ ಮೊದಲು ಟಿಆರ್ ಪಿ ನಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಕಳೆದ ಕೆಲ ವಾರಗಳಿಂದ ಕುಸಿತ ಕಂಡಿತ್ತು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮತ್ತೆ ಮೊದಲ ಸ್ಥಾನಕ್ಕೆ ಬಂದಿದೆ.
ಒಪನಿಂಗ್ ದಿನ 9+ ಟಿಆರ್ಪಿ ಪಡೆದು ಮೊದಲ ಸ್ಥಾನ ಪಡೆದುಕೊಂಡಿತು. ಶನಿವಾರ ಬಿಗ್ ಬಾಸ್ಗೆ 7.3 ಟಿಆರ್ಪಿ ಸಿಕ್ಕಿದೆ. ಭಾನುವಾರ 6.9 ಟಿಆರ್ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.0 ಟಿಆರ್ಪಿ ಸಿಕ್ಕಿದೆ. ವಾರಾಂತ್ಯದ ಟಿಆರ್ಪಿಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಇನ್ನು ಈ ವಾರದಿಂದ ಕೂಡ ಅಷ್ಟೇನೂ ಸಂಚಿಕೆ ಚೆನ್ನಾಗಿ ಆಗುತ್ತಿಲ್ಲ ಎನ್ನುವುದು ಕೆಲವರ ಅಭಿಪ್ರಾಯ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಇದೀಗ ಮತ್ತೆ ಕಮ್ ಬ್ಯಾಕ್ ಅಗಿದೆ. ಯಾವಾಗ ಧಾರಾವಾಹಿಯ ಸಮಯ ಬದಲಾವಣೆ ಆಯ್ತೋ ಅಲ್ಲಿಂದ ಧಾರಾವಾಹಿ ಟಿಆರ್ಪಿ ಕುಸಿಯುತ್ತಲೇ ಬಂತು. ಇದೀ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದೆ. ವೀಕ್ಷಕರಿಗೆ ಕಥೆ ಇಷ್ಟವಾಗುತ್ತಿದೆ. ಧಾರಾವಾಹಿ ವಿಚಾರಕ್ಕೆ ಬಂದರೆ ಸ್ನೇಹಾ ಹಾಗೂ ಬಂಗಾರಮ್ಮ ಬಂದ ಕಾರು ಆಕ್ಸಿಡೆಂಟ್ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಾ ಕೊನೆಯುಸಿರೆಳೆದಿದ್ದಾಳೆ. ಇತ್ತ ಹೆಂಡತಿಗಾಗಿ ಕಾದು ಕುಳಿತ ಕಂಠಿಯನ್ನು ಕಂಡು ವೀಕ್ಷಕರು ಕಣ್ಣೀರು ಹಾಕಿದ್ದಾರೆ.
ಟಿಆರ್ ಪಿನಲ್ಲಿ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ, ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಹಲವು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ‘ಅಣ್ಣಯ್ಯ’ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಇತ್ತೀಚೆಗೆ ಆರಂಭವಾದ ಧಾರಾವಾಹಿ ಇದಾಗಿದ್ದು, ಕಡಿಮೆ ಟಿಆರ್ಪಿ ಪಡೆದಿತ್ತು. ಈಗ ಧಾರಾವಾಹಿ ಮತ್ತೆ ಪುಟಿದ್ದೆದ್ದಿದೆ. ಐದನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ.