ಬೆಂಗಳೂರು: ಸೋದರ ಸಂಬಂಧಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಗೋಪಾಲಪುರದಲ್ಲಿ ನಡೆದಿದೆ. ಸೋನು (35) ಕೊಲೆಯಾದ ವ್ಯಕ್ತಿ. ಈ ಹಿಂದೆ ಮೃತನ ಸಹೋದರ ಅಕ್ರಮ್ ಜೊತೆ ಫಾರೂಕ್ ಜಗಳ ಮಾಡಿಕೊಂಡಿದ್ದ.
ಈ ವೇಳೆ ಅಕ್ರಮ್, ಫಾರೂಕ್ ಪತ್ನಿ ವಿಚಾರವಾಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಬಳಿಕ ಜಗಳ ಹೆಚ್ಚಾಗಿದ್ದು, ಮಾವ ರಿಯಾಜ್ ಗಲಾಟೆ ತಡೆಯಲು ಎಂಟ್ರಿ ಕೊಟ್ಟಿದ್ದನು. ಈ ವೇಳೆ ಗೋಪಾಲಪುರದ ಗುಜುರಿ ಅಂಗಡಿಗೆ ಸಂಧಾನ ಮಾಡುಲು ಕರೆಸಿದ್ದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.