ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸಿಇಟಿ ಪರೀಕ್ಷೆ ನಡೆಯಿತು.. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಟೆನ್ಷನ್ ನಲ್ಲಿ ಇದ್ರೆ ಮಂಡಳಿ ಮಾತ್ರ ಗಾಯದ ಮೇಲೆ ಬರೆ ಎಳೆದಂತೆ ಮಕ್ಕಳಿಗೆ ಮತ್ತೊಂದು ಟೆನ್ಷನ್ ನೀಡಿತ್ತು..ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ. ರಾಜ್ಯಾದ್ಯಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮೊದಲ ದಿನದ ಸಿಇಟಿ ಪರೀಕ್ಷೆ ನಡೆಯಿತು..
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಹುಮ್ಮಸ್ಸಿನಲ್ಲಿದ್ರು.. ಆದ್ರೆ ಪರೀಕ್ಷೆ ನಂತರ ಗೊಂದಲದಲ್ಲಿದ್ರು.. ಯಾಕಂದರೆ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಎಡವಟ್ಟಾಗಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಕಳೆದ ವರ್ಷ ಸೆಟ್ ಮಾಡಿದ ಪ್ರಶ್ನೆಪತ್ರಿಕೆ ಕೊಡ್ತಾ ಕೆಇಎ? ಎಂಬ ಪ್ರಶ್ನೆ ಮೂಡುವಂತಾಗಿದೆ. ಪಠ್ಯಕ್ರಮದಲ್ಲಿ ಇಲ್ಲದ 21 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಜೀವಶಾಸ್ತ್ರದ 10 ಪ್ರಶ್ನೆಗಳು, ಗಣಿತ ವಿಷಯದ 11 ಪ್ರಶ್ನೆಗಳನ್ನು ಔಟ್ ಆಫ್ ಸಿಲಬಸ್ ಕೇಳಲಾಗಿದೆ ಎಂದು ಹೇಳಲಾಗಿದೆ
ಕೇವಲ ನಿನ್ನೆ ಅಷ್ಟೇ ಅಲ್ಲ ಇಂದು ನಡೆದ ಪರೀಕ್ಷೆಯಲ್ಲೂ ಕೂಡ ಸುಮಾರು ೧೦ ಅಂಕಗಳಷ್ಟು ಔಟ್ ಆಫ್ ಸಿಲಬಸ್ ಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ ಸಿಇಟಿ ಪರೀಕ್ಷೆ ಮೊದಲ ದಿನ ಜೀವಶಾಸ್ತ್ರ,
ಗಣಿತದ ವಿಷಯದಲ್ಲಿ 21 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಆಗಿವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ.. ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ. ಗ್ರಾಮೀಣ ಪ್ರದೇಶ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ. ಮರು ಪರೀಕ್ಷೆ, ಕೃಪಾಂಕ ನೀಡಿಕೆ, ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆ ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಪರಿಗಣಿಸುವುದು ಸಮಸ್ಯೆಗೆ ಪರಿಹಾರ ಎಂದು ಆಗ್ರಹಿಸುತ್ತಿದ್ದಾರೆ.