ಬೆಂಗಳೂರು: ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕನಾಗಿ ಅಶೋಕ್ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿಯಾದರು.
ಬೆಂಗಳೂರಿನ ವಿಜಯನಗರದ ಬಿಜಿಎಸ್ ಶಾಖ ಮಠದಲ್ಲಿ ಇಂದು ಬೆಳಿಗ್ಗೆ ಶಾಸಕರಾದ ಕೆ.ಗೋಪಾಲಯ್ಯನವರು ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರ ಆಶೀರ್ವಾದವನ್ನು ಪಡೆದರು.
ಹಾಗೆ ಸ್ವಾಮಿಜಿಯವರು ಅಶೀಕ್ ಅವರಿಗೆ ಹೂವಿನಮಾಳೆ ಹಾಕಿ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಎಸ್. ಮುನಿರಾಜು ಹಾಗೂ ಮುಖಂಡರು ಉಪಸ್ಥಿತರಿದ್ದರು.