ರಾಕಿಂಗ್ ಯಶ್ ಅವರ ಮುದ್ದಿನ ಮಡದಿ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಜೊತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.
ಯಶ್ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರೆ ರಾಧಿಕಾ ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಮಕ್ಕಳ ಜೊತೆ ಆಗಾಗ ಟ್ರಿಪ್ ಮಾಡ್ತಾ ರಾಧಿಕಾ ಎಂಜಾಯ್ ಮಾಡ್ತಿದ್ದಾರೆ.
ಯಶ್ ರನ್ನು ಮದುವೆಯಾದ ಬಳಿಕ ರಾಧಿಕಾ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ. ಆದ್ರೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದಾರೆ.
ಇನ್ಸ್ಟಾದಲ್ಲಿ ರಾಧಿಕಾ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿರುವ ನಟಿ ಸದ್ಯ ಮಕ್ಕಳ ಜೊತೆ ರಜೆ ದಿನಗಳನ್ನು ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಜೊತೆಗೆ ಅವರ ತಂದೆ-ತಾಯಿ ಕೂಡ ಕಾಣಿಸಿಕೊಂಡಿದ್ದಾರೆ. ಅಮ್ಮ ಹಾಗೂ ಮಗಳ ಜೊತೆ ರಾಧಿಕಾ ಪಂಡಿತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಾಧಿಕಾ ಶೇರ್ ಮಾಡಿರುವ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗ್ತಿದೆ. ಈ ಫೋಟೋಗಳಲ್ಲಿ ಯಶ್ ಕಾಣಿಸಿಲ್ಲ. ಎಲ್ಲಿ ನಮ್ಮ ಯಶ್ ಎಂದು ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.
ರಾಧಿಕಾ ತಂದೆ ಕೂಡ ಮೊಮ್ಮಕ್ಕಳ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಬೋಟ್ನಲ್ಲಿ ಯಶ್ ಮಗಳು ಐರಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಾಧಿಕಾ ಮಕ್ಕಳ ಜೊತೆ ನೇಚರ್ ಎಂಜಾಯ್ ಮಾಡ್ತಿದ್ದು. ಫ್ಯಾಮಿಲಿ ಮಂದಿ ಹಾಗೂ ಸ್ನೇಹಿತರ ಜೊತೆ ಒಳ್ಳೆ ಕ್ಷಣಗಳನ್ನು ಕಳೆದಿದ್ದಾರೆ.
ಯಶ್ ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಆಗಿದ್ರೂ ಫ್ಯಾಮಿಲಿಗೆ ಟೈಮ್ ಕೊಟ್ಟೇ ಕೊಡ್ತಾರೆ. ಆಗಾಗ ಫ್ಯಾಮಿಲಿ ಟ್ರಿಪ್ ಹೋಗ್ತಾರೆ. ಈ ಬಾರಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿರುವ ಹಿನ್ನೆಲೆ ರಾಧಿಕಾ ಮಾತ್ರ ಮಕ್ಕಳ ಟ್ರಿಪ್ ಮಾಡ್ತಿದ್ದಾರೆ.
ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ.ಯಶ್ ರನ್ನು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ.