ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ಯಂಗ್ಸ್ಟರ್. ಅವರು ಬೇಕಾದರೆ ಏನಾದರೂ ಮಾತನಾಡಲಿ ಎಂದು ಜೆಡಿಎಸ್ (JDS) ವರಿಷ್ಠ ಹೆಚ್.ಡಿ.ದೇವೇಗೌಡ (H.D.Deve gowda) ಹೇಳಿದರು.ಜೆಡಿಎಸ್ ಕಾಂಗ್ರೆಸ್ನ (Conrgess) ‘ಬಿ’ ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂದು ಹೇಳಿದ್ದರು. ಈ ಬಾರಿ ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಎತ್ತರಕ್ಕೆ ಬೆಳೆದ ನಾಯಕ. ಅವರು ಹಾಗೆ ಮಾತಾಡೋದು ಸರಿನಾ? ಅವರಿಗೆ ಬಿಡ್ತೀನಿ. ರಾಹುಲ್ ಗಾಂಧಿ ಯಂಗ್ಸ್ಟರ್, ಅವರು ಬೇಕಾದ್ರೆ ಏನಾದ್ರು ಮಾತಾಡಲಿ. ಮೋದಿ ಅವರು ಹಾಗೆ ಹೇಳಿದ್ದನ್ನು ಅವರಿಗೆ ಬಿಡ್ತೀನಿ.
ನಾನೇನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾಡಿದ್ದಾರೆ ಇಡೀ ರಾಷ್ಟ್ರಕ್ಕೆ ಗೊತ್ತು. ನಾನು ಏನೇನು ಮಾಡಿದ್ದೇನೆ ಅಂತ ಪುಸ್ತಕ ಬಂದಿದೆ. ಹಲವಾರು ವಿಷಯ ಅದರಲ್ಲಿ ಇದೆ. ಮುಸ್ಲಿಂ ಮೀಸಲಾತಿ, ಮಹಿಳೆಯರ ಮೀಸಲಾತಿ, ವಾಲ್ಮೀಕಿ ಮೀಸಲಾತಿ, ಈದ್ಗಾ ವಿಚಾರ ಏನೇನು ಮಾಡಿದ್ದೇನೆ ನೋಡಲಿ. ದೊಡ್ಡವರ ಹೇಳಿದ್ದಾರೆ ಹೇಳಲಿ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.