ಕಳಸಾ ಬಂಡೂರಿ ಯೋಜನೆ ಗೋವಾ ಸಿಎಂ ಕ್ಯಾತೆ ವಿಚಾರವಾಗಿ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ವಿಜಯಪುರದಲ್ಲಿ ಮಾತನಾಡಿದ ಅವರು, ಇದೊಂದು ಕುಡಿಯುವ ನೀರಿನ ಯೋಜನೆ ಆಗಿದೆ. ಇದನ್ನು ಯಾರು ತಕರಾರು ಮಾಡುವಂತದ್ದಲ್ಲ. ಇದು ಕಳಸಾ ಮತ್ತು ಬಂಡೂರಿ ಪ್ರತ್ಯೇಕ ಆಣೆಕಟ್ಟು ಮಾಡ್ಬೇಕು ಅಂತ ಹೇಳಿದ್ದೆ.
ಅದಕ್ಕೆನು ಜಾಸ್ತಿ ಅರಣ್ಯ ನಾಶವಾಗೋದಿಲ್ಲ. ನಾನು ಜಲ ಸಂಪನ್ಮೂಲ ಸಚಿವನಿದ್ದಾಗ ಸಾವಿರ ಕೋಟಿ ಅನುದಾನ ಮೀಸಲಿಟ್ಟು ಟೆಂಡರ್ ಕರೆದಿದ್ದೆ. ನಮ್ಮ ಸರ್ಕಾರ ಬಿದ್ದು ಹೋಯ್ತು. ಮುಂದೆ ಚುನಾವಣಾ ನೀತಿಸಂಹಿತೆ ಜಾರಿಗೆ ಬಂತು. ಕುಡಿಯುವ ನೀರಿಗೆ ಯಾರು ತಕರಾರು ಮಾಡಬಾರದು ಅಂತ ಇದೆ. ಅದನ್ನ ಮುಂದುವರೆಸಿಕೊಂಡು ಹೋಗಬೇಕು ಅಂತ ಆಗ್ರಹ ಮಾಡ್ತಿನಿ ಎಂದರು.
ಇದೇ ವೇಳೆ ಅಗಸ್ಟ ತಿಂಗಳಲ್ಲಿ ಮೋದಿ ಸರ್ಕಾರ ಪತನವಾಗಲಿದೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಹೇಳಿಕೆ ವಿಚಾರವಾ
ಮಾತನಾಡಿ, ಅವರು ಹಗಲು ಕನಸು ಕಾಣುತ್ತಿದ್ದಾರೆ. ಅವರು ಕನಸು ನನಸಾಗಲು ಸಾಧವ್ಯೇ ಇಲ್ಲ. ಲಾಲು ಪ್ರಸಾದ ಯಾದವ್ ಗೆ ನರಿ ಬುದ್ದಿ ಇದೆ ಎಂದರು.
ರಾಹುಲ್ ಗಾಂಧಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಹುಲ್ ಗಾಂಧಿ ಒಬ್ಬರು ಅಪ್ರಬುದ್ದ ನಾಯಕ. ಅರೆ ಬೆರೆ ಬೆಂದಿರುವ ನಾಯಕ. ಅವರಿಗೆ ಈ ದೇಶದ ಜನರ ಭಾವನೆ, ಸಂಸ್ಕೃತಿ ಗೊತ್ತಿಲ್ಲ. ಹಿಂದೂಗಳ ಬಗ್ಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದರು. ಅದನ್ನು ನಾವು ಈಗಾಗಲೇ ಖಂಡಿಸಿದ್ದೇವೆ, ಈಗಲೂ ಖಂಡಿಸುತ್ತೇವೆ. ಅವರು ಕ್ಷಮೆಯಾಚನೆ ಮಾಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.