ಲೇಹ್: ಆಡಳಿತಾರೂಢ ಬಿಜೆಪಿಯ (BJP) ಸೈದ್ಧಾಂತಿಕ ಪೋಷಕರಾಗಿರುವ ಆರ್ಎಸ್ಎಸ್ (RSS) ಸರ್ಕಾರದ ಪ್ರತಿ ಸಂಸ್ಥೆಯಲ್ಲೂ ತನ್ನ ಜನರನ್ನ ಇರಿಸುತ್ತಿದೆ, ಅವರ ಮೂಲಕ ಎಲ್ಲವನ್ನೂ ನಡೆಸುತ್ತಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು (Jammu And Kashmir) ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊದಲ ಬಾರಿಗೆ ಲಡಾಖ್ಗೆ ಭೇಟಿ ನೀಡಿರುವ ಅವರು ಲೇಹ್ ನಲ್ಲಿ ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನೀವು ಕೇಂದ್ರ ಸರ್ಕಾರದ (Union Government) ಯಾವುದೇ ಸಚಿವರನ್ನ ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನ ನಡೆಸುತ್ತಿಲ್ಲ ಎಂದೇ ನಿಮಗೆ ಹೇಳುತ್ತಾರೆ. ಆರ್ಎಸ್ಎಸ್ನಿಂದ ನಿಯೋಜಿತವಾದ ವ್ಯಕ್ತಿಗಳು ವಾಸ್ತವವಾಗಿ ಈ ಸಚಿವಾಲಯಗಳನ್ನ ನಡೆಸುತ್ತಿದ್ದಾರೆ. ಅವರೇ ಏನು ಮಾಡಬೇಕೆಂದು ಅವರೇ ಸೂಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.