ನವದೆಹಲಿ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಮನೆಯನ್ನು ಖಾಲಿಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತುಘಲಕ್ ಲೇನ್ನ (Tughlaq Lane) ಬಂಗಲೆ ಹೊರಗೆ 2 ಟ್ರಕ್ಗಳಲ್ಲಿ (Trucks) ಕಾರ್ಮಿಕರು ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಕಳೆದ ತಿಂಗಳ ಕೊನೆಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಏಪ್ರಿಲ್ 22ರೊಳಗೆ ದೆಹಲಿಯಲ್ಲಿರುವ ತುಘಲಕ್ ಲೇನ್ ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿತ್ತು. ಮನೆ ಖಾಲಿ ಮಾಡಲು ಒಪ್ಪಿಗೆ ಸೂಚನೆ ನೀಡುತ್ತಿದ್ದಂತೆ ರಾಹುಲ್ ಗಾಂಧಿಗೆ ಪಕ್ಷದ ನಾಯಕರಿಂದ ಮನೆ ಆಫರ್ಗಳು ಹರಿದು ಬಂದಿತ್ತು.
ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ (Sonia Gandhi) ಅವರ ಜನಪಥ್ ನಿವಾಸಕ್ಕೆ ತೆರಳುತ್ತಿದ್ದು, ಈ ಹಿನ್ನೆಲೆಂಯಲ್ಲಿ ತಮ್ಮ ನಿವಾಸ ಹಾಗೂ ಕಚೇರಿಯ ವರ್ಗಾವಣೆಯ ಪ್ರಕ್ರಿಯೆಯಲ್ಲಿದ್ದಾರೆ. ನಿಗದಿತ ದಿನಾಂಕಕ್ಕಿಂತಲೂ ಮೊದಲು ನಿವಾಸವನ್ನು ತೊರೆಯುವುದಾಗಿ ರಾಹುಲ್ ಗಾಂಧಿ ಕಚೇರಿ ತಿಳಿಸಿದೆ.
ಬಿಜೆಪಿ ನನ್ನ ಮನೆಯನ್ನು ತೆಗೆದುಕೊಂಡು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ಅವರು ವಯನಾಡಿನ ಜನರು ಮತ್ತು ಅವರ ಸಮಸ್ಯೆಗಳನ್ನು ಪ್ರತಿನಿಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದರು