ರಾಯಚೂರು:- ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು 21ರ ಯುವಕ ಸಾವನ್ನಪ್ಪಿದ್ದು ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಯುವಕನನ್ನು 21 ವರ್ಷದ ಗಣೇಶ್ ಎಂದು ಗುರುತಿಸಲಾಗಿದ್ದು, ನಿಂಗಪ್ಪ, ರಮೇಶ್ ಎಂಬುವವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ಮದ್ಯಪಾನ ಮಾಡಿದ್ದ. ಕುಡಿದ ಅಮಲಿನಲ್ಲಿ ಬಾವಿಯ ಬಳಿ ತೆರಳಿದಾಗ ಕಾಲು ಜಾರಿ ಬಾವಿಗೆ ಬಿದ್ದು, ಸಾವನ್ನಪ್ಪಿರುವುದಾಗಿ ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಮೃತನ ಕುಟುಂಬಸ್ಥರಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.