ಸತತವಾಗಿ ದಿನವಿಡೀ ಮಳೆ ಸುರಿಯುತ್ತಿದ್ದರೆ ಉತ್ಸಾಹ ಕುಂದುತ್ತದೆ. ಇಂತಹ ಸಂದರ್ಭದಲ್ಲಿ ದಿನಚರಿಯಲ್ಲಿ ಈ ಆರು ಅಭ್ಯಾಸಗಳನ್ನು ರೂಢಿಸಿಕೊಂಡರೆ ನಮ್ಮಲ್ಲಿನ ಶಕ್ತಿ, ಉತ್ಸಾಹ ಕುಂದುವುದಿಲ್ಲ.
- ಮಳೆಗಾಲದಲ್ಲಿ ಬೆಳಗ್ಗೆ ಎದ್ದು ಬಿಸಿ ಪಾನೀಯ ಸೇವಿಸುವ ಮೂಲಕ ನಿಮ್ಮ ದಿನಚರಿ ಆರಂಭಿಸುವುದರಿಂದ ನಿಮ್ಮ ದೇಹದ ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
- ಹರ್ಬಲ್ ಟೀಗೆ ಶುಂಠಿ ಅಥವಾ ಒಂದೆರಡು ಎಸಳು ತುಳಸಿ ಎಲೆ ಹಾಕಿ ಕುಡಿಯುವುದರಿಂದ ದೇಹದ ಶಕ್ತಿಯ ಮಟ್ಟ ಸುಧಾರಿ ಸುತ್ತದೆ.
- ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟಗೊಂಡ ಒಂದು ಅಧ್ಯಯನ ಪ್ರಕಾರ, ಶುಂಠಿ ಹಾಕಿದ ಚಹಾ ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ಇಂತಹ ಸಣ್ಣ ಅಭ್ಯಾಸಗಳು ನಿಮ್ಮ ಮೂಡ್ ನ್ನು ಚುರುಕಾಗಿ ಇರಿಸುವುದಲ್ಲದೆ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
- ನಾವು ಸೇವಿಸುವ ಆಹಾರ ಸಮತೋಲಿತ ಪೌಷ್ಠಿಕಾಂಶಭರಿತ ಆಹಾರವಾಗಿದ್ದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಉಂಟಾಗು ವುದಿಲ್ಲ.
- ಓಟ್ಸ್, ಕೆಂಪು ಅಕ್ಕಿ, ಇಡಿ ಗೋಧಿ ಸೇವನೆ ದೇಹಕ್ಕೆ ಬಹಳ ಉತ್ತಮ. ತಾಜಾ ಹಣ್ಣು, ತರಕಾರಿಗಳು, ವಿಟಮಿನ್, ಖನಿಜಭರಿತ ಆಹಾರ ಗಳು ಆಯಾಸ ವನ್ನು ಕಡಿಮೆ ಮಾಡುತ್ತದೆ.
- ಕಬ್ಬಿಣದ ಅಂಶ ಹೆಚ್ಚಾಗಿರುವ ಹಣ್ಣು, ತರಕಾರಿಗಳು ಮಳೆಗಾ ಲದಲ್ಲಿ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯಿರಿ, ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಸುಸ್ತು, ಬಳಲಿಕೆ ಹೆಚ್ಚಾಗುತ್ತದೆ.
- ಹೊರಗೆ ವಾತಾವರಣದಲ್ಲಿ ಧೋ ಎಂದು ಮಳೆ ಸುರಿಯುವಾಗ, ತೇವಾಂಶ ಹವಾಮಾನದಲ್ಲಿ ಹೊರಗೆ ಓಡಾಟ ಅಸಾಧ್ಯವಾದಾಗ ಮನೆಯೊಳಗೆ ವ್ಯಾಯಾಮ, ಯೋಗಾಭ್ಯಾಸ ನಡೆಸಿ.
- ದೇಹದ ವರ್ಕೌಟ್ ಮಾಡಿ, ಇದರಿಂದ ಶಕ್ತಿ ಹೆಚ್ಚುತ್ತದೆ. ಎಂಡೋರ್ಫಿನ್ ಮಟ್ಟ ಹೆಚ್ಚಾಗಿ ನಿಮ್ಮ ಮೂಡ್ ಮತ್ತು ಶಕ್ತಿ ಹೆಚ್ಚುತ್ತದೆ. ವ್ಯಾಯಾಮ ಕುರಿತು ಅಮೆರಿಕನ್ ಕೌನ್ಸಿಲ್ ನಡೆಸಿ ರುವ ಅಧ್ಯಯನ ಪ್ರಕಾರ, ಮಳೆಗಾಲ ದಲ್ಲಿ ಹೊರಗಿನ ಚಟುವಟಿ ಕೆಯಷ್ಟೇ ಮನೆಯೊಳಗಿನ ಚಟುವಟಿಕೆ ಕೂಡ ಮುಖ್ಯವಾಗುತ್ತದೆ.