ಕಲಬುರಗಿ: ಇತ್ತೀಚಿಗೆ ಸುರಿದ ನಿರಂತರ ಮಳೆ ಹಿನ್ನಲೆ ಕಲಬುರಗಿ ಜಿಲ್ಲೆಯಲ್ಲಿ ಹತ್ತಿ ಸಂಪೂರ್ಣ ಹಾಳಾಗಿದ್ದು ರೈತ ಕಂಗಾಲಾಗಿದ್ದಾನೆ.
ವಿಶೇಷವಾಗಿ ಚಿಂಚೋಳಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿತ್ತು..ಆದ್ರೆ ಮಳೆ ಹೊಡೆತಕ್ಕೆ ಹತ್ತಿ ಸರ್ವನಾಶವಾಗಿದೆ.
ಬಿಡಿಸಿ ಮನೆಗೆ ತಂದ ಹತ್ತಿ ಸಹ ಉಪಯೋಗಕ್ಕೆ ಬಾರದಂತಾಗಿದೆ..ಅದಕ್ಕಾಗಿ ಸಾಲಸೂಲ ಮಾಡಿ ಬೆಳೆದ ಹತ್ತಿ ಕೈಕೊಟ್ಟ ಪರಿಣಾಮ ಸರ್ಕಾರ ನೆರವಿಗೆ ಬರಬೇಕು ಅಂತ ರೈತ ಬಳಗ ಆಗ್ರಹಿಸಿದೆ..