ನೆನ್ನೆ ಸುರಿದ ಮಳೆಯಿಂದಾಗಿ ಕುಶಾಲನಗರದ ಸಾಯಿ ಬಡಾವಣೆ,ಕುವೆಂಪು ಬಡಾವಣೆಯ ನೂರಾರು ಮನೆಗಳು ಜಲಾವೃತವಾಗಿದ್ದು ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ .ಸಂತ್ರಸ್ತ ಕುಟುಂಬಗಳಿಗೆ ಸ್ಥಳೀಯ ಶಾಸಕರು,ಕಂದಾಯ ಅಧಿಕಾರಿಗಳು,ದೈರ್ಯ ತುಂಬಿ ಕಾಳಜಿ ಕೇಂದ್ರಕ್ಕೆ,ಅಥವಾ ಗಂಜಿ ಕೇಂದ್ರಕ್ಕೆ ಕಳುಹಿಸಲಾಯಿತು.
ಮಡಿಕೇರಿ,ಸೋಮವಾರಪೇಟೆ,ಭಾಗಮಂಡಲ,ತಲಕಾವೇರಿ,ವಿರಾಜಪೇಟೆ, ಸುತ್ತ ಮುತ್ತ ಭಾರಿ ಮಳೆಯಾಗಿದ್ದು ನದಿ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಾವೃತಕ್ಕೆ ಕಾರಣವಾಗಿದೆ.
8/8/2018 ರಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಂದು ನೂರಾರು ಮನೆಗಳು ವಾಹನಗಳು,ಜಾನುವಾರುಗಳು, ಪ್ರಾಣಿಪಕ್ಷಿಗಳು ಜಲಾವೃತವಾಗಿದ್ದು,ಅದನ್ನು ಮರೆಯುವ ಮುನ್ನವೇ ಮತ್ತೊಂದು ದೊಡ್ಡ ಪ್ರವಾಹ ಆಗಬಹುದೇ ಎಂಬ ಭೀತಿ ಕೊಡಗಿನ ಜನತೆಯನ್ನು ಕಾಡುತ್ತಿರುವುದು ಅಕ್ಷರಶಃ ಸತ್ಯ.ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.