ಕನ್ನಡದ ‘ಪೆಂಟಗನ್’ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ತನಿಷಾ ಕುಪ್ಪಂಡ ಕಳೆದೆರೆಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸಂದರ್ಶನದ ವೇಳೆ ಯುಟ್ಯೂಬರ್ ಇಬ್ಬರು ಬ್ಲೂಫಿಲ್ಮ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಟಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಗ್ಗೆ ನಟಿ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಟ ಹರ್ಷ ಸೋಷಿಯಲ್ ಮೀಡಿಯಾದಲ್ಲಿ ಬ್ಲೂಫಿಲ್ಮ್ ನಲ್ಲಿ ನಟಿಸ್ತೀರಾ ಎಂದು ಕೇಳಿದ್ದಾಗಿ ತನಿಷಾ ಆರೋಪಿಸಿದ್ದರು. ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದರು. ತನಿಷಾ ಮಾಡಿರುವ ಆರೋಪಕ್ಕೆ ಇದೀಗ ನಟ ಹರ್ಷ ಸ್ಪಷ್ಟನೆ ನೀಡಿದ್ದಾರೆ.
ನಾನು ಮತ್ತು ತನಿಷಾ ಒಳ್ಳೆಯ ಸ್ನೇಹಿತರು. ನೀಲಿ ಚಿತ್ರದ ಬಗ್ಗೆ ಕೇಳಿದ್ದ ಯುಟ್ಯೂಬರ್ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿ, ನಾನು ಸಂದೇಶ ಕಳಿಸಿದ್ದು ನಿಜ. ಆದರೆ ಯಾವುದೇ ಕೆಟ್ಟ ಆಲೋಚನೆಯಿಂದ ಅಲ್ಲ. ಬ್ಲೂಫಿಲ್ಮ್ ಮಾಡ್ತೀರಾ ಎಂದು ಆ ಯುಟ್ಯೂಬರ್ ಹೀಗ್ಯಾಕೆ ಕೇಳಿದ್ದರು ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ನಗುವಿನ ಇಮೋಜಿ ಕಳುಹಿಸಿದೆ ಅಷ್ಟೇ. ಆ ಸಂದೇಶವೇ ಗೊಂದಲಕ್ಕೆ ಕಾರಣವಾಗಿದೆ. ಅನ್ಯತಾ ಭಾವಿಸಬಾರದು ಎಂದು ಮತ್ತೆ ವಾಯ್ಸ್ ನೋಟ್ ಕಳುಹಿಸಿದ್ದೀನಿ. ಯುಟ್ಯೂಬರ್ ಯಾಕೆ ಹೀಗೆ ಪ್ರಶ್ನೆ ಮಾಡಿದ್ದರು ಎಂದು ಕೇಳಿದ್ದೀನಿ. ಅದು ಬಿಟ್ಟು ನೀಲಿ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ನಾನು ಪ್ರಶ್ನೆ ಮಾಡಿಲ್ಲ. ಎಲ್ಲವೂ ನಾವು ಅರ್ಥ ಮಾಡಿಕೊಳ್ಳುವ ದೃಷ್ಟಿಕೋನದಲ್ಲಿದೆ ಎಂದು ಹರ್ಷ ಸ್ಪಷ್ಟನೆ ನೀಡಿದ್ದಾರೆ.
ತನಿಷಾ ಅವರಿಗೆ ಕೆಟ್ಟ ಆಲೋಚನೆಯಿಂದ ನಾನು ಸಂದೇಶ ಕಳುಹಿಸಿಲ್ಲ. ಇದೀಗ ಅವರ ಸಿನಿಮಾ ರಿಲೀಸ್ಗೆ ರೆಡಿಯಿದ್ದು, ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ತನಿಷಾ ಅವರ ನಡೆ ಎಷ್ಟು ಸರಿ ಎಂದು ಹರ್ಷ ಪ್ರಶ್ನೆ ಮಾಡಿದ್ದಾರೆ. ನಟಿಯಾಗಿ ಬೋಲ್ಡ್ ಸಿನಿಮಾದಲ್ಲಿ ನಟಿಸಿದ ಮೇಲೆ ಬೋಲ್ಡ್ ಪ್ರಶ್ನೆಗಳನ್ನ ಕೂಡ ಎದುರಿಸಲು ರೆಡಿಯಾಗಿಬೇಕು ಎಂದಿದ್ದಾರೆ.