ತಾಪಮಾನ ಹೆಚ್ಚಳದಿಂದಾಗಿ ರಾಜಸ್ಥಾನ್ ಮಂದಿ ಹೀಟ್ ಸ್ಟ್ರೋಕ್ನಿಂದ ಬಳಲುತ್ತಿದ್ದಾರೆ.
ಸೋಮವಾರ (ಮೇ 27) ರಾಜ್ಯದ ಫಲೋಡಿಯಲ್ಲಿ 49.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯಕ್ಕಿಂತ 6.3 ಡಿಗ್ರಿ ಹೆಚ್ಚಳವಾಗಿದೆ.
ಜೈಪುರದಲ್ಲಿ ಗರಿಷ್ಠ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಭಾನುವಾರಕ್ಕಿಂತ 0.8 ಡಿಗ್ರಿ ಹೆಚ್ಚಾಗಿದೆ. ಕೋಟಾದಲ್ಲಿ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಬಹುತೇಕ ಎಲ್ಲಾ ನಗರಗಳು 45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿವೆ. ಅಜ್ಮೀರ್ನಲ್ಲಿ ಗರಿಷ್ಠ ತಾಪಮಾನ 46.3 ಡಿಗ್ರಿ ಸೆಲ್ಸಿಯಸ್, ಭಿಲ್ವಾರ್ (47.4), ಭರತ್ಪುರ (48.2), ಅಲ್ವಾರ್ (46.2), ಪಿಲಾನಿ (48.5), ಚಿತ್ತೋರ್ಗಢ (47), ಬಾರ್ಮರ್ (49.3), ಜೈಸಲ್ಮೇರ್ (48.7), ಜೋಧ್ಪುರ (47.4), ಬಿಕಾನೇರ್ (48.2), ಚುರು (48), ಶ್ರೀ ಗಂಗಾನಗರ (48.3), ಮತ್ತು ಧೋಲ್ಪುರದಲ್ಲಿ 48.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಅಲ್ಲದೇ ಇಂದು ಸಹ (ಮೇ 28 ರಂದು)
ತಾಪಮಾನ ಏರಿಕೆಯಾಗಲಿದೆ.
ಪ್ರಸ್ತುತ ನಡೆಯುತ್ತಿರುವ ತೀವ್ರತರವಾದ ಬಿಸಿಗಾಳಿ ಪರಿಸ್ಥಿತಿಯು ಮುಂದಿನ 2-3 ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ