ಇಸ್ಲಾಮಾಬಾದ್ : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದು ಸಮುದಾಯದ ರಾಜೇಂದರ್ ಮೇಘಾವರ್ ಪಾಕಿಸ್ತಾನ್ ಪೊಲೀಸ್ ಸೇವೆಯಲ್ಲಿ ಮೊದಲ ಹಿಂದು ಅಧಿಕಾರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾಡಿನ್ ಗ್ರಾಮಾಂತರ ಮತ್ತು ಹಿಂದುಳಿದ ಜಿಲ್ಲೆಯವರಾದ ರಾಜೇಂದರ್ ಮೇಘವಾರ್ ಅವರು ದೇಶದ ಮೊದಲ ಹಿಂದೂ ಪೊಲೀಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಪ್ರಧಾನವಾಗಿ ಮುಸ್ಲಿಂ ರಾಷ್ಟ್ರದಲ್ಲಿ ಅಡೆತಡೆಗಳನ್ನು ಮುರಿದು, ಮೇಘವರ್ ಅವರನ್ನು ಪಾಕಿಸ್ತಾನದ ಪೊಲೀಸ್ ಸೇವೆ (ಪಿಎಸ್ಪಿ) ಅಡಿಯಲ್ಲಿ ಫೈಸಲಾಬಾದ್ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್ಪಿ) ನೇಮಕಗೊಂಡಿದ್ದಾರೆ.
ರಾಜೇಂದರ್ರನ್ನು ಫೈಸಲಾಬಾದ್ನ ಗುಲ್ಬರ್ಗ್ ಪ್ರದೇಶದ ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್(ಎಎಸ್ಪಿ) ಆಗಿ ನೇಮಕಗೊಳಿಸಿದ್ದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.