ತುಮಕೂರು ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬಿಜೆಪಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದಾರೆ..ದಿನಕ್ಕೊಬ್ಬರಂತೆ ಆಕಾಂಕ್ಷಿತರು ಬಂಡಾಯದ ಬಾವುಟ ಹಾರಿಸುತ್ತಿದ್ದು,ಕುಣಿಗಲ್,ಗುಬ್ಬಿ,ತುಮಕೂರು ನಗರದ ಬಿಜೆಪಿ ಅಭ್ಯರ್ಥಿಗಳಿಗೆ ತಲೆಬಿಸಿಯಾಗಿದೆ..ಬಿಜೆಪಿಯ ಬಂಡಾಯವನ್ನ ಜೆಡಿಎಸ್ ಪಕ್ಷ ತಮ್ಮತ್ತ ಸೆಳೆದುಕೊಳ್ಳೋ ಮೂಲಕ ರಾಜಕೀಯ ಚದುರಂಗದಾಟಕ್ಕೆ ಮುಂದಾಗಿದೆ..
ಬಿಜೆಪಿ ಅಭ್ಯರ್ಥಿಗಳ ಘೋಷಣೆ ದಿನದಿಂದಲೂ ತುಮಕೂರು ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿತರು ಬಿಜೆಪಿಗೆ ಬಂಡಾಯದ ಶಾಕ್ ನೀಡ್ತಿದ್ದಾರೆ..ತುಮಕೂರು ನಗರದ ಸೊಗಡು ಶಿವಣ್ಣ, ಕುಣಿಗಲ್ ನ ರಾಜೇಶ್ ಗೌಡ,ಮುದ್ದಹನುಮೇಗೌಡ,ಗುಬ್ಬಿಯ ಬೆಟ್ಟಸ್ವಾಮಿ ಹೀಗೆ ಸಾಲು ಸಾಲು ಹಿರಿಯ ನಾಯಕರು ಬಿಜೆಪಿಗೆ ಗುಡ್ ಬೈ ಹೇಳಿ ಚುನಾವಣಾ ರಣಕಣದಲ್ಲಿ ತೊಡೆತಟ್ಟುತ್ತಿದ್ದಾರೆ..
ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ ಗೌಡ ಕೂಡ ಇಂದು ಬಂಡಾಯದ ಸಮರ ಸಾರಿದ್ದಾರೆ..ಕುಣಿಗಲ್ ನಲ್ಲಿ ನೂತನ ಕಚೇರಿ ತೆರದಿರೋ ರಾಜೇಶ್ ಗೌಡ,ತಮ್ಮ ಅಪಾರ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದಾರೆ..ಕಾಣದ ಕೈಗಳು ಹಾಗೂ ಪಕ್ಷದ ನಾಯಕರಿಂದ ಮೋಸವಾಗಿದ್ದು,19 ರಂದು ತಮ್ಮ ನಾಮಪತ್ರ ಸಲ್ಲಿಸೋದಾಗಿ ತಿಳಿಸಿದ್ದಾರೆ…
ಇನ್ನೂ ಗುಬ್ಬಿ ಬಿಜೆಪಿ ಪಾಳಯದಲ್ಲೂ ಅಸಮಾಧಾನಿತರು ಸದ್ದು ಮಾಡ್ತಿದ್ದಾರೆ..ದಿಲೀಪ್ ಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಹಿರಿಯ ನಾಯಕ ಬೆಟ್ಟಸ್ವಾಮಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ..ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀನಿವಾಸ್ ಘೋಷಣೆಯಾದ ದಿನದಿಂದಲೂ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ನಾಯಕ ಹೊನ್ನಗಿರಿಗೌಡ ಕೂಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ..ಇಬ್ಬರೂ ಕೂಡ ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದು,ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಗೆ ಬಲಬಂದಂತಾಗಿದೆ..
ಬಿಜೆಪಿ,ಕಾಂಗ್ರೆಸ್ ಅಸಮಾಧಾನಿತರನ್ನ ತಮ್ಮತ್ತ ಸೆಳೆಯೋ ಮೂಲಕ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ..ಈಗಾಗಲೇ ಸೊಗಡು ಶಿವಣ್ಣ ಕೂಡ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದು,ಪಕ್ಷ ಸೇರ್ಪಡೆಯಾಗೋ ಸಾಧ್ಯತೆ ಇದೆ..ಟಿಕೆಟ್ ಸಿಗದೇ ಅಸಮಾಧಾನಗೊಂಡಿರೋ ಮುಖಂಡರನ್ನ ಪಕ್ಷಕ್ಕೆ ಗಾಳ ಹಾಕೋ ಮೂಲಕ ಜೆಡಿಎಸ್ ಭದ್ರಕೋಟೆ ಮಾಡಿಕೊಳ್ತಿದೆ