ತಮಿಳುನಾಡು ಮೂಲದ ಜಾರ್ಖಂಡ್ (Jharkhand) ಅವರನ್ನು ರಜನಿಕಾಂತ್ ಭೇಟಿ ಮಾಡಿದ್ದಾರೆ. ಹಿಮಾಲಯ ಪ್ರವಾಸದಲ್ಲಿದ್ದ ರಜನಿಕಾಂತ್, ಆ ಪ್ರವಾಸವನ್ನು ಮುಗಿಸಿಕೊಂಡು ರಾಂಚಿಯಲ್ಲಿ ರಾಧಾಕೃಷ್ಣನ್ (Radhakrishnan) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋಗಳನ್ನು ರಾಜ್ಯಪಾಲರು (Governor) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಧಾಕೃಷ್ಣನ್ ಮತ್ತು ರಜನಿಕಾಂತ್ ಸ್ನೇಹಿತರು. ಹಾಗಾಗಿ ಇದೊಂದು ಸೌಜನ್ಯದ ಭೇಟಿ ಎಂದು ಸ್ವತಃ ರಾಜ್ಯಪಾಲರೇ ಹೇಳಿಕೊಂಡಿದ್ದಾರೆ. ಭಾರತದ ಶ್ರೇಷ್ಠ ನಟ, ಆತ್ಮೀಯ ಸ್ನೇಹಿತ ಮತ್ತು ಮಹಾನ್ ಮಾನವತಾವಾದಿ ರಜನಿಕಾಂತ್ ಅವರು ರಾಂಚಿಗೆ (Ranchi) ಭೇಟಿ ನೀಡಿದ್ದರು. ರಾಜಭವನಕ್ಕೆ ಅವರನ್ನು ಸ್ವಾಗತಿಸಿ ಭೇಟಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.