73ನೇ ವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಯುವ ನಟರು ನಾಚುವಂತೆ ನಟಿಸುತ್ತಿದ್ದಾರೆ. ಆಕ್ಷಯ್ ಸಿನಿಮಾಗಳಲ್ಲಿ ರಜನಿ ಎತ್ತಿದ ಕೈ. ಈ ಮೂಲಕ ರಜನಿಕಾಂತ್ ಅನೇಕ ಕಲಾವಿಧರಿಗೆ ಮಾದರಿ ಆಗಿದ್ದಾರೆ. ಆದರೆ ಇದನ್ನು ಕೆಲವರು ನೆಗೆಟಿವ್ ಆಗಿ ತೆಗೆದುಕೊಂಡಿದ್ದಾರೆ. ಈ ವಯಸ್ಸಿನಲ್ಲಿ ರಜನಿಕಾಂತ್ ನಟಿಸುತ್ತಿರವುದಕ್ಕೆ ಉಳಿದವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಕೆಲವರು ಟೀಕಿಸಿದ್ದರು. ಇದಕ್ಕೆ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ.
ರಜನಿಕಾಂತ್ ಬಗ್ಗೆ ಟೀಕಿಸಿರುವ ಡಿಎಂಕೆ ನಾಯಕ ದೊರೈ ಮುರುಗನ್ ಅವರು, ‘ರಜನಿಕಾಂತ್ ಅವರು ಹಲ್ಲು-ಕೂದಲು ಕಳೆದುಕೊಂಡ ಬಳಿಕವೂ ನಟನೆ ಮಾಡುತ್ತಿದ್ದಾರೆ. ರಜನಿಕಾಂತ್ ಅಂಥ ವಯಸ್ಸಾದ ನಟರು ಈಗಲೂ ನಟಿಸುತ್ತಿರುವುದಕ್ಕೆ ಯುವ ಕಲಾವಿದರಿಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಗುತ್ತಿಲ್ಲ’ ಎಂದಿದ್ದಾರೆ.
ಅಂದ ಹಾಗೆ ರಜನಿಕಾಂತ್ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಎಂಕೆ ಹಿರಿಯ ನಾಯಕರ ಬಗ್ಗೆ ಮಾತನಾಡಿದ್ದರು. ಈ ವೇಳೆ ರಜನಿಕಾಂತ್ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಹೊಗಳಿದ್ದರು. ಪಕ್ಷದ ಹಳೆಯ ತಲೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೀರಿ ಎಂದು ಸ್ಟಾಲಿನ್ ಗೆ ಹೇಳಿದ್ದರು. ಹಳೆಯ ನಾಯಕರನ್ನು ಹಳೆಯ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದ್ದರು. ಹೊಸ ನಾಯಕರು ಬರೋಕೆ ಹಳೆಯ ನಾಯಕರು ಅವಕಾಶ ಮಾಡಿಕೊಡಲ್ಲ ಎಂದಿದ್ದರು. ಇದು ದುರೈ ಮುರುಗನ್ ಅವರಿಗೆ ಇಷ್ಟ ಆಗಿಲ್ಲ. ಹೀಗಾಗಿ ಅವರದ್ದೇ ಸ್ಟೈಲ್ನಲ್ಲಿ ದೊರೈ ಉತ್ತರ ನೀಡಿದ್ದಾರೆ.
ಇನ್ನೂ ಮುರುಗನ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಜಿನಿ, ಮುರುಗನ್ ಅವರು ಏನು ಹೇಳಿದರೂ ನನಗೆ ಬೇಸರವಿಲ್ಲ. ಅವರು ನಾನು ಹಳೆಯ ಸ್ನೇಹಿತರು. ಅವರೆಂದರೆ ನನಗೆ ತುಂಬಾ ಇಷ್ಟ. ನಮ್ಮಿಬ್ಬರ ಸ್ನೇಹ ಸದಾ ಮುಂದುವರೆಯುತ್ತದೆ ಎಂದಿದ್ದರು. ರಜಿನಿ ಹೇಳಿಕೆಗೆ ರಿಯಾಕ್ಟ್ ಮಾಡಿದ್ದ ದೊರೈ ಮುರುಗನ್, ನಾನು ಕೂಡ ಅದನ್ನೇ ಹೇಳುತ್ತೇನೆ. ನಮ್ಮಿಬ್ಬರ ಜೋಕ್ ಅನ್ನು ಹಗೆತನ ಎಂದುಕೊಳ್ಳಬಾರದು. ನಾವಿಬ್ಬರ ಸ್ನೇಹ ಹಿಂದೆ ಹೇಗಿತ್ತೋ ಅದೇ ರೀತಿ ಮುಂದುವರೆಯುತ್ತದೆ ಎಂದಿದ್ದಾರೆ.