ಬಾಲಿವುಡ್ ಹಾಟ್ ಬೆಡಗಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮೂರನೇ ಮದುವೆಗೆ ಸಜ್ಜಾಗಿದ್ದಾರೆ. ಈಗಾಗಲೇ ಎರಡು ಮದುವೆಯಾಗಿ ಗಂಡಂದಿರಿಂದ ದೂರವಾಗಿರೋ ನಟಿ ಇದೀಗ ಪಾಕಿಸ್ತಾನದ ಪೊಲೀಸ್ ಆಫೀಸರ್ ಜೊತೆ ಮೂರನೇ ಮದುವೆಯಾಗಲು ಸಿದ್ದವಾಗಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಖಿ ಸಾವಂತ್, ಪಾಕಿಸ್ತಾನದ ವ್ಯಕ್ತಿಯೊಬ್ಬರಿಂದ ಮದುವೆ ಪ್ರಸ್ತಾಪ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದಿಂದ ನನಗೆ ಮದುವೆ ಪ್ರಸ್ತಾಪಗಳು ಬರುತ್ತಿವೆ ಎಂದಿರುವ ರಾಖಿ, ನನ್ನ ಹಿಂದಿನ ಮದುವೆಗಳಿಂದ ನನಗಾದ ನೋವು, ನಾನು ಅನುಭವಿಸಿದ ನರಕಯಾತನೆ, ಎಲ್ಲವೂ ಪಾಕಿಸ್ತಾನದ ಪ್ರಜೆಗಳಿಗೆ ಗೊತ್ತು ಅವರು ಕೂಡ ಎಲ್ಲವನ್ನು ನೋಡಿದ್ದಾರೆ. ಭಾವಿ ಪತಿ ನಟ ಹಾಗೂ ಪೊಲೀಸ್ ಅಧಿಕಾರಿಯಾಗಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಈ ಬಾರಿ ಉತ್ತಮ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನದ ಜನರನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಅಲ್ಲಿ ನನಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಈ ರೀತಿಯ ಮದುವೆಗಳಿಂದ 2 ದೇಶಗಳ ನಡುವೆ ಶಾಂತಿ ನೆಲೆಸುತ್ತೆ ಎಂದಿದ್ದು, ಪಾಕಿಸ್ತಾನದಲ್ಲಿ ನನ್ನ ಮದುವೆ ನಡೆಯಲಿದ್ದು ಭಾರತದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ. ಅಲ್ಲದೆ ಸ್ವಿಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ಗೆ ಹನಿಮೂನ್ಗೆ ನಾವು ಹೋಗಲಿದ್ದೇವೆ, ಆ ನಂತರ ದುಬೈನಲ್ಲಿ ನಾವು ಖಾಯಂ ಆಗಿ ನೆಲಸಲಿದ್ದೇವೆ ಅಂತ ರಾಖಿ ಸಾವಂತ್ ಹೇಳಿದ್ದಾರೆ.
ಈ ಹಿಂದೆ ರಾಖಿ ಸಾವಂತ್ ರಿತೇಶ್ ರಾಜ್ ಸಿಂಗ್ ಎಂಬುವವರನ್ನು ಮದುವೆಯಾಗಿದ್ದರು. ರಿತೇಶ್ ಮತ್ತು ರಾಖಿ ಹಿಂದಿ ಬಿಗ್ ಬಅಸ್ 15ರ ಸೀಸನ್ನಲ್ಲಿ ಸ್ಪರ್ಧಿಗಳಾಗಿದ್ದರು. ಆ ಬಳಿಕ 2023ರಲ್ಲಿ ಮೈಸೂರಿನ ಅದಿಲ್ ಖಾನ್ ದುರಾನಿ ಅವರನ್ನು ಮದುವೆಯಾಗಿದ್ದರು.