ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ರಾಖಿ ಸಾವಂತ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಆಕೆಗೆ ಹಲವು ಕಾಯಿಲೆಗಳಿರುವುದು ಗೊತ್ತಾಗಿದೆ.
ಹೃದಯ ಸಮಸ್ಯೆ ಜೊತೆಗೆ ಕಿಡ್ನಿ ತೊಂದರೆಯಿಂದಲೂ ನಟಿ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಹೊಟ್ಟೆಯಲ್ಲಿ 10 ಸೆಂ.ಮೀ ಗಡ್ಡೆ ಇದ್ದು, ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೀಗ ಶಸ್ತ್ರಚಿಕಿತ್ಸೆಯ ನಂತರ ರಾಖಿಯ ಮೊದಲ ವೀಡಿಯೊ ಹೊರಬಿದ್ದಿದೆ. ಅದರಲ್ಲಿ ಅವರು ನೋವಿನಿಂದ ನರಳುತ್ತಿರುವುದನ್ನು ಕಾಣಬಹುದಾಗಿದೆ. ರಾಖಿಯ ಈ ವೀಡಿಯೊವನ್ನು ಆಕೆಯ ಮಾಜಿ ಪತಿ ರಿತೇಶ್ ಅವರು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಖಿ ಆಸ್ಪತ್ರೆಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಶಸ್ತ್ರಚಿಕಿತ್ಸೆಯ ನಂತರ ರಾಖಿಗೆ ನಡೆಯಲು ಕಷ್ಟಪಡುತ್ತಿದ್ದಾರೆ.
ನೋವಿನಿಂದ ಬಳಲುತ್ತಿರುವ ನಟಿಯನ್ನು ಆಸ್ಪತ್ರೆಯ ಸಿಬ್ಬಂದಿ ನಡೆಯಲು ಪ್ರಯತ್ನಿಸಿದಾಗ ಆಕೆ ನೋವಿನಿಂದ ಸಂಕಟ ಪಡುತ್ತಿದ್ದಾರೆ. ಅಲ್ಲದೇ ನರ್ಸ್ ಅವರಿಗೆ ಮೊದಲು ನೇರವಾಗಿ ನಿಲ್ಲಲು ಮತ್ತು ನಂತರ ನಿಧಾನವಾಗಿ ನಡೆಯಲು ಪ್ರಯತ್ನಿಸುವಂತೆ ಹೇಳುವುದು ವೀಡಿಯೋದಲ್ಲಿ ಕೇಳುತ್ತದೆ. ಇದಾದ ನಂತರ ರಾಖಿ ನಿಧಾನವಾಗಿ ನಡೆಯುತ್ತಾರೆ.
ರಾಖಿಯ ಈ ವೀಡಿಯೊವನ್ನು ಹಂಚಿಕೊಂಡ ರಿತೇಶ್, ನನಗೆ ತುಂಬಾ ಸಂತೋಷವಾಗಿದೆ. ರಾಖಿ ಜೀ ಶೀಘ್ರದಲ್ಲೇ ನಮ್ಮ ನಡುವೆ ಇರುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಅವರು ಇಂದು ನಡೆಯುವುದನ್ನು ನೋಡಲು ಸಂತೋಷವಾಗಿದೆ. ದೇವರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ರಾಖಿ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದಾರೆ.