ಅಯೋಧ್ಯೆ: ಪ್ರಭು ಶ್ರೀರಾಮನ ಅಸ್ತಿತ್ವಕ್ಕಾಗಿ ನಮ್ಮ ದೇಶದಲ್ಲಿ ಕಾನೂನು ಸಂಘರ್ಷ ಕೂಡ ನಡೆದಿದೆ. ಭಾರತದ ನ್ಯಾಯದೇವತೆ ಆದೇಶದಂತೆ ನ್ಯಾಯಬದ್ಧವಾಗಿ ಮಂದಿರ ನಿರ್ಮಾಣವಾಗಿದೆ. ಇಂದು ಇಡೀ ದೇಶ ಇಂದು ರಾಮ ದೀಪಾವಳಿ ಆಚರಿಸುತ್ತಿದೆ. ದೇಶದ ಪ್ರತಿ ಮನೆಯಲ್ಲೂ ಇಂದು ಸಂಜೆ ಶ್ರೀರಾಮನ ಜ್ಯೋತಿ ಬೆಳಗಲಿದೆ. ಕಾಲಚಕ್ರ ಮತ್ತೆ ಬದಲಾವಣೆಯಾಗಿದೆ.
ನನ್ನ 11 ದಿನಗಳ ಉಪವಾಸ ವ್ರತ ಶ್ರೀರಾಮನ ಮಂದಿರದಲ್ಲಿ ಅಂತ್ಯಗೊಳಿಸಿದ್ದೇನೆ. ಸಮುದ್ರದಿಂದ ಸರಯೂವರೆಗೆ ಯಾತ್ರೆಯ ಅವಕಾಶ ಸಿಕ್ಕಿದೆ. ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ ಎಂದು ಮೋದಿ ಹೇಳಿದರು.