ಬೆಂಗಳೂರು: ರಾಮಜನ್ಮಭೂಮಿಯ ರಾಮಲಲ್ಲಾನ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮದ ಆಹ್ವಾನ ವಿಚಾರ ಬಿಜೆಪಿ- ಕಾಂಗ್ರೆಸ್ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುವ ಕೆಲ ಕಾಂಗ್ರೆಸ್ ನಾಯಕರಿಗೆ ಆಹ್ವಾನ ಕೊಟ್ಟಿರೋದು ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ಹೋಗಬೇಕಾ ಅನ್ನೋ ಗೊಂದಲಕ್ಕೆ ಕಾರಣವಾಗಿದೆ. ಈ ಮಧ್ಯೆ ಪರಮೇಶ್ವರ್ ನಾವು ಹೋಗೇಕೆ ಸಿದ್ದವಿದ್ದೇವೆ ಅನ್ನುತ್ತಿರೋದು ಟಿಪ್ಪುvs ರಾಮನ ಹೊರಟಕ್ಕೆ ವೇದಿಕೆಯಾಗಿದೆ...
ಪ್ರಭು ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ ಅಯೋಧ್ಯಾ ಸಾರ್ವಭೌಮನ ಭವ್ಯ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ರಾಮಜನ್ಮಭೂಮಿ ಟ್ರಸ್ಟ್ ದೇಶದ 10 ಸಾವಿರಕ್ಕೂ ಹೆಚ್ಚು ಗಣ್ಯರಿಗೆ ಮಂದಿರ ಉದ್ಘಾಟನೆಗೆ ಆಹ್ವಾನ ಕೊಟ್ಟಿದೆ, ಈ ಮಧ್ಯೆ ಕಾಂಗ್ರೆಸ್ ನಾಯಕರಿಗು ಕಾರ್ಯಕ್ರಮಕ್ಕೆ ಆಹ್ವಾನ ಕೊಡಲಾಗಿದೆ. ಬಿಜೆಪಿ ಪಕ್ಷ ಬೆಳೆದು ಅಧಿಕಾರದ ಗದ್ದುಗೆ ಏರಿದ್ದೆ ರಾಮಜನ್ಮಭೂಮಿ ಹೋರಾಟದ ಹಿನ್ನೆಲೆಯಿಂದ ಹಿಂದುತ್ವ ಬಿಜೆಪಿಯ ಸಿದ್ಧಾಂತ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಮುಸ್ಲಿಂ ತುಷ್ಠೀಕರಣ ಮಾಡುತ್ತೆ ಅಂತ ಕೇಸರಿ ನಾಯಕರು ಆರೋಪ ಮಾಡ್ತಾನೆ ಇರ್ತಾರೆ ಇದಕ್ಕೆ ಪುಷ್ಠಿ ಎಂಬಂತೆ ಕೈನ ಕೆಲ ನಾಯಕರು ರಾಮನ ಅಸ್ಥಿತ್ವವನ್ನೇ ಪ್ರಶ್ನಿಸಿದ್ರು ಹಾಗೂ ಕೋರ್ಟ್ ನಲ್ಲಿ ಆದ ವಿಚಾರಣೆಯಲ್ಲಿ ಕಾಂಗ್ರೆಸ್ ಬಾಬ್ರಿ ಮಸೀದಿ ಪರವಾಗಿ ನಿಂತಿತ್ತು….
ಸದ್ಯ ಕಾಂಗ್ರೆಸ್ ನಾಯಕರು ರಾಮ ಮಂದಿರ ಉದ್ಘಾಟನೆಗೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಗೊಂದಲದಲ್ಲಿ ಇದ್ದಾರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಅಂತ ಹೈಕಮಾಂಡ್ ನಿರ್ಣಯ ತಗೋತಾರೆ. ಅವರ ಸೂಚನೆಯಂತೆ ನಾವು ನಡೆದುಕೊಳ್ತೇವೆ ಬಿಜೆಪಿಯವ್ರು ಮಾತ್ರ ಹಿಂದೂಗಳಲ್ಲ
ನಾವೂ ಕೂಡಾ ಹಿಂದೂಗಳೇ. ರಾಮನ ಆಡಳಿತ ಬಿಜೆಪಿಯವರಿಗೆ ಮಾತ್ರ ಇಲ್ಲ, ಎಲ್ಲರಿಗೂ ಅನ್ವಯಿಸುತ್ತೆ
ಇಡೀ ವಿಶ್ವಕ್ಕೆ ರಾಮನ ಆಡಳಿತ ಸಲ್ಲುತ್ತೆ, ಕಾಂಗ್ರೆಸ್ ಪಕ್ಷ ಹೋಗಬೇಕು ಅಂತ ತೀರ್ಮಾನ ಮಾಡಿದರೆ ಹೋಗಲು ನಾವು ಹಿಂದೆಮುಂದೆ ನೋಡಲ್ಲ ಎಂದಿದ್ದಾರೆ ಪರಮೇಶ್ವರ್…
ಪರಮೇಶ್ವರ್ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ ಟಾಂಗ್ ಕೊಟ್ಟಿದ್ದಾರೆ ಕಾಂಗ್ರೆಸ್ ನವರು
ರಾಮನವಮಿಯನ್ನ ಯಾವತ್ತೂ ಆಚರಣೆ ಮಾಡಿಲ್ಲ.
ಟಿಪ್ಪು ಜಯಂತಿಯನ್ನ ರಾಜ್ಯಾಧ್ಯಂತ ಸಂಭ್ರಮದಿಂದ ಮಾಡುತ್ತಾರೆ ರಾಮ ,ಕೃಷ್ಣ, ಕೇಸರಿ ಶಾಲು,ಕುಂಕುಮ ಹಾಕಿದ್ರೆ ಅವರಿಗೆ ಆಗಲ್ಲ. ಅಲ್ಪಸಂಖ್ಯಾತರ ಕಾಲೋನಿ ಮಾತ್ರ ಅಭಿವೃದ್ಧಿಯಾಗಬೇಕು ಅನುತ್ತಾರೆ,
ಬಹುಸಂಖ್ಯಾತರು ಇರುವ ಕಾಲೋನಿ ಅಭಿವೃದ್ಧಿ ಆಗಬಾರದು ಬ್ರಿಟಿಷರಂತೆ ಕಾಂಗ್ರೆಸ್ ದು ಒಡೆದು ಆಳುವ ನೀತಿ ಅಂತ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ….
ಪರಮೇಶ್ವರ್ ಹೇಳಿಕೆಗೆ ಮಾಜಿ ಸಿಎಂ ಸದಾನಂದಗೌಡ ಸಹ ಟಾಂಗ್ ಕೊಟ್ಟಿದ್ದಾರೆ ಜಿ ಪರಮೇಶ್ವರಗೆ ಈಗಾದರೂ ಬುದ್ದಿ ಬಂತು. ಈಗಲಾದರೂ ಜಗತ್ತಿನ ರಾಮ ಎಂದಿದ್ದಾರೆ, ಆ ರಾಮ ಪರಮೇಶ್ವರಗೆ ಒಳ್ಳೆಯದು ಮಾಡಲಿ ಅಂತ ವ್ಯಂಗ್ಯವಾಡಿದ್ದಾರೆ ಮಾಜಿ ಸಿಎಂ..
ಒಟ್ನಲ್ಲಿ ಇಷ್ಟು ದಿನ ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ರಾಮ vs ಟಿಪ್ಪು ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ರಾಮನ ಹೆಸರು ಕೇಳಿದ್ರೆ ಹಿಂದೆ ಹೋಗ್ತಿದ್ದ ಕೆಲ ಕಾಂಗ್ರೆಸ್ ನಾಯಕರು ನಮ್ಮ ಹೈಕಮಾಂಡ್ ಹೇಳಿದ್ರೆ ನಾವು ಉದ್ಘಾಟನೆಗೆ ಹೋಗಲು ಸಿದ್ಧ ಅಂತಿದ್ದಾರೆ. ಕೈ ನಾಯಕರ ಹೇಳಿಕೆಯನ್ನೇ ಬಂಡವಾಳ ಮಾಡ್ಕೊಂಡಿರುವ ಕೇಸರಿ ನಾಯಕರು ಹಿಂದೂ vs ಮುಸ್ಲಿಂ ರಾಜಕಾರಣಕ್ಕೆ ವೇದಿಕೆ ಸೃಷ್ಟಿಸಿದ್ದು ಕಾರ್ಯಕ್ರಮ ಹತ್ತಿರವಾಗ್ತಿದ್ದಂತೆ ಇದು ತಾರಕ್ಕೇರೋ ಸಾಧ್ಯತೆಗಳು ಕಂಡುಬರ್ತಿವೆ.