ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರು ನಾಮಪತ್ರಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಿ ಕೋರಮಂಗಲದ ಬಿಜೆಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಈ ಭಾರಿಯೂ ನಾವೇ ಅಧಿಕಾರಕ್ಕೆ ಬರ್ತೇವೆ. ನಾನು ೯ ನೇ ಬಾರಿ ಸ್ಪರ್ಧೆ ಮಾಡಿದವನು. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು.
ಇನ್ನೂ 145 ರಿಂದ 150 ಸೀಟು ಗಳನ್ನು ಈ ಭಾರಿ ಗೆಲ್ತೇವೆ ಎಂದು ಬಿಜೆಪಿಯವರು ಸುಮ್ಮನೆ ಹೇಳಿಕೊಂಡು ತಿರುಗ್ತಾರೆ. ಆದರೆ ರಾಜ್ಯದ ಜನರ ಒಲವು ನಮ್ಮ ಕಡೆಗಿದೆ. ಬೆಲೆ ಏರಿಕೆಯಿಂದ ಜನ ರೋಸಿಹೋಗಿದ್ದಾರೆ. ಹಾಗಾಗಿ ನಾವೇ ಅಧಿಕಾರಕ್ಕೆ ಬರ್ತೇವೆ. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿ ದೊಡ್ಡವರು ಇದ್ದಾರೆ. ನಮಗೆ ಸರ್ಕಾರ ಬರಬೇಕು ಅಷ್ಟೇ. ನನಗೆ ಯಾವುದೇ ಸಿಎಂ ಆಸೆ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇನ್ನೂ ಇದೇ ವೇಳೆ ಪಕ್ಷದಲ್ಲಿ ಕೆಲವರಿಗೆ ಟಿಕೆಟ್ ಸಿಗದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮಲ್ಲಿ ಎಲ್ಲರಿಗೂ ಸಿಕ್ಕಿದೆ. ಯಾರೋ ಒಂದಿಬ್ಬರಿಗೆ ಸಿಕ್ಕಿಲ್ಲ. ಬಿಜೆಪಿಯಲ್ಲಿ ಎಷ್ಟು ಜನರಿಗೆ ಸಿಕ್ಕಿಲ್ಲ ಹೇಳಿ. ಅಲ್ಲಿ ಎಷ್ಟು ಅಸಮಾಧಾನ ಇಲ್ಲ ಹೇಳಿ. ಇರೋ ಅಸಮಾಧಾನವನ್ನ ನಾವು ಬಗೆಹರಿಸಿಕೊಳ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.