ರಾಮನಗರ: ಮಗನಿಗೆ ವೋಟ್ ಕೇಳಲು ಜೆಡಿಎಸ್ ಮುಖಂಡರಿಗೆ ಯಾವ ನೈತಿಕತೆ ಇದೆ? ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪ್ರಶ್ನಿಸಿದ್ದಾರೆ. ಪ್ರಚಾರ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಶಾಸಕರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಜೆಡಿಎಸ್ ಮುಖಂಡರನ್ನು ಪ್ರಶ್ನೆ ಮಾಡುತ್ತೇನೆ.
ಕೆರೆಗಳಲ್ಲಿ ಬೆಳೆದಿರುವ ಗಿಡಗಳನ್ನು ಕೂಡ ಅವರ ಕೈಯಲ್ಲಿ ತೆಗಿಸಲು ಸಾಧ್ಯವಾಗಲಿಲ್ಲ.
ಇನ್ನೂ ನಾನು ತಂದಿದ್ದ ನೀರಾವರಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲೇ ಇಲ್ಲ. ಅವರ ಬಗ್ಗೆ ದೂರು ಹಾಕುತ್ತಿಲ್ಲ. ಅವರ ಕಾಲಾವಧಿಯಲ್ಲಿ ತಾಲೂಕು 8-10 ವರ್ಷ ಹಿಂದೆ ಬಿದ್ದಿದೆ. ಯಾವ ಮಾನದಂಡದ ಮೇಲೆ ಮಗನಿಗೆ ವೋಟ್ ಕೇಳೋಕೆ ಬರುತ್ತಿದ್ದಾರೆ ಎಂದು ಅವರೇ ಹೇಳಬೇಕು. ಅವರ ಮಗನಿಗೆ ವೋಟ್ ಕೇಳಲು ಜೆಡಿಎಸ್ ಮುಖಂಡರಿಗೆ ಯಾವ ನೈತಿಕತೆ ಇದೆ? ಎಂದು ಹೇಳಿದರು.
ನಾನು ಈ ತಾಲೂಕಿನ ಮನೆ ಮಗ. ನೀರಾವರಿ ಯೋಜನೆ ಮುಖಾಂತರ ತಾಲೂಕಿನ ಅಭಿವೃದ್ಧಿ ಜಪ ಮಾಡಿದ್ದೇನೆ. ನಮ್ಮವರೇ ರಾಜ್ಯದ ಡಿಸಿಎಂ ಆಗಿದ್ದಾರೆ. ಅವರ ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕು ಎಂದು ಕಾಂಗ್ರೆಸ್ ಸೇರಿದ್ದೇನೆ.
ನನಗೆ ಒಬ್ಬ ದೈತ್ಯ, ಪ್ರಾಮಾಣಿಕ ಸುರೇಶ್ನ ಸೋಲಿಸಿದ್ದೀನಿ ಎನ್ನುವ ನೋವಿದೆ. ನನಗೆ ಕುಮಾರಸ್ವಾಮಿಯವರು ಎನ್ಡಿಎ ಟಿಕೆಟ್ ಕೊಡ್ತೀನಿ ಹೋಗಿ ಕೆಲಸ ಮಾಡು ಎಂದು ಹೇಳಿದ್ದರು. ಆದರೆ ಅವರ ಮಗನನ್ನು ನಿಲ್ಲಿದಲು ನನಗೆ ಟಿಕೆಟ್ ಕೊಡದೇ ನಾಟಕವಾಡಿದರು. ಹಾಗಾಗಿ ನಾನು ನನ್ನ ಮೂಲ ಪಕ್ಷ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.