ಬೆಂಗಳೂರು:- ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಸ್ಫೋಟಕ ವಿಚಾರ ಬಯಲಿಗೆ ಬಂದಿದೆ.
ನಿನ್ನೆಯಷ್ಟೇ ಬಂಧಿತನಾಗಿರುವ ಪ್ರಮುಖ ಆರೋಪಿ ಮುಜಾಮಿಲ್ ಶರೀಫ್ನನ್ನು ಎನ್ಐಎ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಜಾಮಿಲ್ ಹಿನ್ನಲೆ ಗಮನಿಸಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿದೆ.
2019 ರಲ್ಲಿ ಎನ್ಐಎ ದಾಳಿ ವೇಳೆ ಪರಾರಿಯಾಗಿದ್ದ ಶಂಕಿತರಾದ ಮುಸಾವೀರ್ ಹಾಗೂ ಅಬ್ದುಲ್ ಮತಿನ್ ತಾಹಾ ಇದುವರೆಗೆ ಪತ್ತೆಯಾಗಿಲ್ಲ. ಈ ಇಬ್ಬರು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಪ್ರಮುಖ ಆರೋಪಿಗಳಾಗಿದ್ದಾರೆ. ಮುಸಾವೀರ್ ಸ್ಫೋಟಕ ವಸ್ತು ತಂದಿಟ್ಟರೇ, ಇದಕ್ಕೆಲ್ಲಾ ಸೂತ್ರದಾರನಾದ ಅಬ್ದುಲ್ ಮತೀನ್ ತಾಹ ಎನ್ನುವ ಸ್ಫೋಟಕ ವಿಚಾರ ಬಯಲಾಗಿದೆ. ಸದ್ಯ ಹೊರರಾಜ್ಯದಲ್ಲಿ ತಲೆಮರೆಸಿಕೊಂಡ ಈ ಇಬ್ಬರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಮುಜಾಮಿಲ್ ಶರೀಫ್ ಕಳೆದ 16 ವರ್ಷದಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದ. ಈತನ ಕುಟುಂಬ ಚಿಕ್ಕಮಗಳೂರಿನ ದುಬೈನಗರದಲ್ಲಿ ವಾಸವಿದೆ. ಕೆಲಸ ಹುಡುಕಿಕೊಂಡು ಬಂದ ಈತ ಕಳೆದ 16 ವರ್ಷಗಳಿಂದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಬಸವೇಶ್ವರ ನಗರದ ಚಿಕನ್ ಕೌಂಟಿ ರೆಸ್ಟೋರೆಂಟ್ನಲ್ಲಿ ಮುಜಾಮಿಲ್ ಶರೀಫ್ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದ ಹಿಂದೆ ಬಸವೇಶ್ವರ ನಗರ ಹಾವನೂರು ಸರ್ಕಲ್ ಬಳಿ ಚಿಕನ್ ಕೌಂಟಿ ರೆಸ್ಟೋರೆಂಟ್ ನಡೆಸಲಾಗುತ್ತಿತ್ತು. ಸದ್ಯ ಈ ಜಾಗದಲ್ಲಿ ಬೇರೋಂದು ರೆಸ್ಟೋರೆಂಟ್ ನಡೆಸಲಾಗುತ್ತಿದೆ.
ಸದ್ಯ ಈ ಜಾಗದಲ್ಲಿ ಬೇರೋಂದು ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಹೊರರಾಜ್ಯಗಳಿಗೆ ಪರಾರಿಯಾಗಿರುವ ಪ್ರಮುಖ ಇಬ್ಬರು ಆರೋಪಿಗಳಿಗೆ ಮುಜಾಮೀಲ್ ಶರೀಫ್ ಲಾಜಿಸ್ಟಿಕ್ ಸಪೋರ್ಟ್ ಮಾಡಿದ್ದ.
ಸದ್ಯ ಈತನನ್ನು ನಿನ್ನೆ ಎನ್ಐಎ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಸಾವೀರ್ನ ಜವಾಬ್ದಾರಿಯನ್ನು ಮುಜಾಮಿಲ್ ಹೊತ್ತುಕೊಂಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬೆಂಗಳೂರು ಸಮೀಪವೇ ಐಇಡಿಯನ್ನು ಸಿದ್ಧಪಡಿಸಿರುವ ಶಂಕೆ ವ್ಯಕ್ತವಾಗಿದೆ. ಮತೀನ್ ಹಾಗೂ ಮುಸಾವೀರ್ ಜೊತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದ. ಈತನ ಮೂಲಕವೇ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು. ಸ್ಫೋಟಕ್ಕೆ ಬೇಕಾದ ಕಚ್ಚಾ ಸಮಾಗ್ರಿಗಳನ್ನು ಇಬ್ಬರು ತರಿಸಿಕೊಂಡಿದ್ದರು. ಸ್ಫೋಟದ ಸಂಚಿನ ಟಾರ್ಗೆಟ್ ಬಳಿಕ ಬೆಂಗಳೂರು ಸಮೀಪವೇ ಐಇಡಿ ಬಾಂಬ್ ತಯಾರಿ ಮಾಡಲಾಗಿದೆ ಎನ್ನುವ ವಿಚಾರ ಎನ್ಐಎಗೆ ಮಾಹಿತಿ ತಿಳಿದುಬಂದಿದೆ.