ಬೆಂಗಳೂರು: ನಗರದ ಪ್ರಸಿದ್ಧ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಹೋಟೆಲ್ ಸಂಘ ಅಧ್ಯಕ್ಷ ಪಿ.ಸಿರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮೇಶ್ವರಂ ಕೆಫೆ ಹೋಟೆಲ್ ನಲ್ಲಿ ನಡೆದ ಘಟನೆ ಬಹಳ ದುರದೃಷ್ಟಕರ ಇದು ಬಹಳ ಬೇಸರ ತರುವ ವಿಚಾರವಾಗಿದೆ ಬೆಂಗಳೂರಿಗೆ ಬ್ರ್ಯಾಂಡ್ ಬೆಂಗಳೂರು ಎಂಬ ಹೆಸರಿದೆ ಆದರೆ ಈಗ ಅದರ ನೇಮ್ ಫೇಮ್ ಎರಡೂ ಬದಲಾಗುತ್ತಿರುವಂತೆ ಕಾಣುತ್ತಿದೆ.
ಇಲ್ಲಿ ಈ ರೀತಿಯಾದ ಘಟನೆ ನಡೆದಿರುವುದು ಬೇಸರ ವಿಚಾರ ಆದಷ್ಟು ಬೇಗ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸಮಾಡಬೇಕು ಆರೋಪಿಗಳನ್ನ ಪತ್ತೆ ಹಚ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.