ಬೆಂಗಳೂರು: ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ Election ಡಿಎಂಕೆ ದೂರು ನೀಡಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಹಿಂದೆ ತಮಿಳುನಾಡಿನ (Tamil Nadu) ಜನರಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ (NIA) ಯಾರನ್ನೂ ಬಂಧನ ಮಾಡಿಲ್ಲ. ಹೀಗಾಗಿ ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಿದೆ
ತಮಿಳುನಾಡಿನಲ್ಲಿ ಟ್ರೈನಿಂಗ್ ಪಡೆದು, ಬಾಂಬ್ ಇಡಲು ಬೆಂಗಳೂರಿಗೆ (Bengaluru) ರಾಮೇಶ್ವರಂ ಕೆಫೆಗೆ ಶಂಕಿತ ಬಂದಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಎನ್ಐಎ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಎನ್ಐಎ ಇಲ್ಲಿಯವರೆಗೆ ಯಾರನ್ನೂ ಬಂಧಿಸಿದಲ್ಲ ಎಂದು ಡಿಎಂಕೆ ದೂರಿನಲ್ಲಿ ಉಲ್ಲೇಖಿಸಿದೆ.