ಬೆಂಗಳೂರು:- ಬಾಂಬ್ ಬ್ಲಾಸ್ಟ್ ನಿಂದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ರಾಮೇಶ್ವರಂ ಕೆಫೆಗೆ ಸಂಕಷ್ಟ ಎದುರಾಗಿದೆ. ಕೆಫೆ ಮಾಲೀಕನ ನೆತ್ತಿಯ ಮೇಲೆ ಸಂಕಷ್ಟದ ತೂಗುಗತ್ತಿ ತೂಗುತ್ತಿದೆ.
ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ನೊಟೋಸ್- ಕೆಫೆಗೆ ಬೀಗ ಸಾಧ್ಯತೆ ಇದ್ದು, ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಇನ್ಸಿಡೆಂಟ್ ಬಳಿಕ ಇತರೆ ರಾಮೇಶ್ವರಂ ಕೆಫೆ ಮೇಲೆ ಜನರ ಕಣ್ಣು ಬಿದ್ದಿದೆ. ಇಂದಿರಾನಗರದ ರಾಮೇಶ್ವರಂ ಕೆಫೆಯ ಲೈಸೆನ್ಸ್ ರದ್ದಾಗುವ ಸಾಧ್ಯತೆ ಇದೆ. ಅವ್ಯವಸ್ಥೆಗಳ ಆಗರ ಎಂದು ಬಿಬಿಎಂಪಿ ಅಧಿಕಾರಿಗಳಿಂದ ನೊಟೀಸ್ ಜಾರಿ ಮಾಡಲಾಗಿದೆ.
ಕೆಫೆಯಲ್ಲಿನ ನೌಕರರಿಗೆ ಮೂಲಸೌಕರ್ಯದ ಕೊರತೆ ಬಗ್ಗೆ ದೂರು ನೀಡಲಾಗಿದ್ದು, ಇಂದಿರಾನಗರದ ರಾಫೇಶ್ವರಂ ಕೆಫೆಯಲ್ಲಿ ಟಾಯ್ಲೆಟ್ ವ್ಯವಸ್ಥೆ ಇಲ್ಲ. ಕೆಫೆಯ ಸಿಬ್ಬಂದಿ, ಕೆಫೆಯ ಮುಂಭಾಗದಲ್ಲಿ ಶೌಚ ಮಾಡ್ತಿರೋದರ ಬಗ್ಗೆ ದೂರು ನೀಡಲಾಗಿದೆ. ರಾಜೇಶ್ ಎಂಬುವವರಿಂದ ಸಿಎಂ ಕಚೇರಿಗೆ ಟ್ವಿಟ್ಟರ್ ಮೂಲಕ ದೂರು ನೀಡಲಾಗಿದೆ. ದೂರು ನೀಡ್ತಿದ್ದಂಗೆ ಸಿಎಂ ಕಚೇರಿ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ಮಾಡುವಂತೆ ಬಿಬಿಎಂಪಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ಹೀಗಾಗಿ ಕೆಫೆ ಮಾಲೀಕನ ಮೇಲೆ ಸಂಕಷ್ಟದ ತೂಗುಗತ್ತಿ ತೂಗ್ತಿದೆ. ಏಪ್ರಿಲ್ 12 ರಂದು ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.