ಬೆಂಗಳೂರು:- ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬ್ ಇಟ್ಟಿದ್ದ ಉಗ್ರನನ್ನು ಎನ್ ಐಎಯಿಂದ ಅರೆಸ್ಟ್ ಮಾಡಲಾಗಿದೆ.
ಉಗ್ರ ಮುಸಾಫೀರ್ ಶಾಜೀನ್ ಹುಸೇನ್ ಬಂಧಿತ ಆರೋಪಿ. ಉತ್ತರ ಭಾರತದ ರಾಜ್ಯದಲ್ಲಿ ಬಾಂಬರ್ ಅರೆಸ್ಟ್ ಮಾಡಲಾಗಿದೆ. ಎನ್ ಐಎ ತಂಡದಿಂದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡು ಉಗ್ರ ಓಡಾಡುತ್ತಿದ್ದ. ಈ ವೇಳೆ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ. ಉಗ್ರ ಮುಸಾಮೀರ್ ಶಾಜೀನ್ ಹುಸೇನ್ ಜೊತೆ ಮತ್ತೊಬ್ಬ ಉಗ್ರ ಮತೀನ್ ತಾಹಾ ಕೂಡ ಬಂಧಿಸಲಾಗಿದೆ.