ಬೆಂಗಳೂರು:– ರಾಮೇಶ್ವರಂ ಕೆಫೆಯಲ್ಲಿ ವಿ’ಧ್ವಂಸ’ಕ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟ ಬೆನ್ನಲ್ಲೇ ಹೋಟೆಲ್ ಅಸೋಸಿಯೇಷನ್ ಎಚ್ಚೆತ್ತುಕೊಂಡಿದೆ.
ಹೋಟೆಲ್ ನಿಂದ ಗ್ರಾಹಕರು ಅಂತರ ಕಾಯ್ದುಕೊಳ್ಳದಂತೆ ಪ್ಲ್ಯಾನ್ ಮಾಡಲಾಗಿದ್ದು, ಗ್ರಾಹಕರ ಆತಂಕ ಹೋಗಲಾಡಿಸಲು ಮೆಟಲ್ ಡಿಟೆಕ್ಟರ್ ಅಸ್ತ್ರಕ್ಕೆ ಮುಂದಾಗಿದೆ. ಹೋಟೆಲ್ ಗೆ ಬರುವ ಅನುಮಾನಸ್ಪದ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಹ್ಯಾಂಡ್ ಡಿಟೆಕ್ಟರ್ ಮೂಲಕ ಹೋಟೆಲ್ ಗೆ ಬರುವವರ ಬ್ಯಾಗ್ ಚೆಕ್ಕಿಂಗ್ ಮಾಡಲಾಗಿದ್ದು, 50ಕ್ಕೂ ಹೆಚ್ಚು ಜನರು ಕುಳಿತುಕೊಂಡು ಆಹಾರ ಸೇವಿಸುವ ಹೊಟೆಲ್ ನಲ್ಲಿ ಅಳವಡಿಕೆ ಮಾಡಲಾಗಿದೆ. ಈ ವಿಚಾರವಾಗಿ ನಗರದ ಹೋಟೆಲ್ ಮಾಲೀಕರ ಜೊತೆ ಶೀಘ್ರದಲ್ಲೇ ಮೀಟಿಂಗ್ ನಡೆಸಲಿದೆ. ಜನನಿಬಿಡ ಪ್ರದೇಶಲ್ಲಿರುವ ಹೋಟೆಲ್ ಗಳಿಗೆ ಹೆಚ್ಚು ಭದ್ರತೆ ಒದಗಿಸಲು ಸಿದ್ಧತೆ ನಡೆಸಲಾಗಿದೆ.