ಬಾಲಿವುಡ್ ನಟ ರಣಬೀರ್ ಕಪೂರ್ ಬಳಿಕ ಈಗಾಗಲೇ ದುಬಾರಿ ಬೆಲೆಯ ಕಾರುಗಳ ಸಂಗ್ರಹವೇ ಇದೆ. ಇದೀಗ ನಟ 8 ಕೋಟಿ ಬೆಲೆಯ ಕಾರನ್ನು ಖರೀದಿಸಿ ಮತ್ತೆ ಸುದ್ದಿಯಾಗಿದ್ದಾರೆ.
ಕಳೆದ ವರ್ಷ ನಟ ರಣಬೀರ್ ಕಫೂರ್ ನಟನೆಯ ‘ಅನಿಮಲ್’ ಸಿನಿಮಾ 900 ಕೋಟಿ ರೂಪಾಯಿ ಬಾಚಿಕೊಂಡಿದ್ದಷ್ಟೇ ತಡ ರಣಬೀರ್ ರೇಂಜ್ ಬದಲಾಗಿ ಹೋಗಿದೆ. ಒಂದು ಸಮಯದಲ್ಲಿ ಒಂದರ ಹಿಂದೊಂದು ಸೋಲುಗಳನ್ನು ಕಂಡಿದ್ದ ನಟನಿಗೆ ಇದೀಗ ಶುಕ್ರದೆಸೆ ಶುರುವಾಗಿದ್ದು ಬಾಲಿವುಡ್ ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ.
ಸದ್ಯ ರಾಮಾಯಣ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ನಟ ರಣಬೀರ್ ಇದೀಗ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಖರೀದಿಸಿದ್ದಾರೆ. ರಣ್ಬೀರ್ ಕಪೂರ್ ಖರೀದಿಸಿದ ಕಾರು ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಆ ಕಾರಿನ ಬೆಲೆ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8 ಕಾರಿನ ಬೆಲೆ ಬರೋಬ್ಬರಿ 8 ಕೋಟಿ ರೂಪಾಯಿ. ಬೆಂಟ್ಲಿ ತಯಾರಿಸುವ ಕಾರುಗಳಲ್ಲೇ ಇದು ಅತೀ ದುಬಾರಿ ಎಂದು ಹೇಳಲಾಗುತ್ತಿದೆ. ರಣ್ಬೀರ್ ಕಪೂರ್ ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಟ್ಲಿ ತಯಾರಿಸಿದ ಅತ್ಯುತ್ತಮ ಕಾರು ಎಂದು ಹೇಳಲಾಗುತ್ತದೆ. ಈ ಕಾರು 4.0 ಲೀಟರ್ನ ಟರ್ಬೋ ಚಾರ್ಜ್ ಮಾಡಲ್ಪಟ್ಟಿರುವ ವಿ8 ಇಂಜಿನ್ ಇದೆ. ಇದು 542ಬಿಎಚ್ಪಿ ಪವರ್ ಅನ್ನು ಪ್ರಡ್ಯೂಸ್ ಮಾಡುತ್ತೆ. ಈ ದುಬಾರಿ ಕಾರು ಟಾಪ್ ಸ್ಪೀಡ್ ಅನ್ನು ಕೂಡ ಅತೀ ವೇಗವಾಗಿಯೇ ತಲುಪುತ್ತೆ. 0 ಯಿಂದ 100 ಕಿ.ಮೀ/ಗಂಟೆ ವೇಗವನ್ನು ಕೇವಲ 3.9 ಸೆಕೆಂಡುಗಳಲ್ಲಿ ತಲುಪುತ್ತೆ. ಇದು 318 ಟಾಪ್ ಸ್ಪೀಡ್ ವರೆಗೂ ಮುಂದುವರೆಯಬಹುದು.
ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8ನ ಒಳ ವಿನ್ಯಾಸ ಅದ್ಭುತವಾಗಿದೆ. ಐಷಾರಾಮಿ ಇಂಟಿರಿಯರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಡೈಮಂಡ್ ಕಟ್ ಸೀಟಿನ ವಿನ್ಯಾಸ ಮಾಡಲಾಗಿದೆ. 12.3 ಇನ್ಫ್ಲೋಟೈನ್ಮೆಂಟ್ ಡಿಸ್ಪೈ ಇದೆ. ಈ ಡಿಸ್ಪೈ ಮೂರು ದಿಕ್ಕುಗಳಿಗೆ ತಿರುಗುತ್ತದೆ. ಒಂದೊಂದು ಸೈಟ್ನಲ್ಲೂ ಒಂದೊಂದು ಫೀಚರ್ಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷತೆ ಹಾಗೂ ಆರಾಮಾಗಿ ಪ್ರಯಾಣ ಮಾಡಬಹುದಾಗಿದೆ.