ಮಾಜಿ ಬಿಗ್ ಬಾಸ್ ಸ್ಪರ್ಧಿ, ಸದ್ಯ ಒಂದಲ್ಲ ಒಂದು ಚಿತ್ರ ವಿಚಿತ್ರ ಬಟ್ಟೆ ಧರಿಸಿಕೊಂಡು ಬರುತ್ತಿರುವ ಉರ್ಫಿ ಜಾವೇದ್ ಬಗ್ಗೆ ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಕರೀನಾ ಕಪೂರ್ ಜೊತೆಗಿನ ಸಂದರ್ಶನದಲ್ಲಿ ಉರ್ಫಿ ಕುರಿತಾಗಿ ಮಾತನಾಡಿದ್ದು, ಆಕೆಯ ಫ್ಯಾಷನ್ ಅಭಿರುಚಿಯ ಬಗ್ಗೆಯೂ ಹೇಳಿದ್ದಾರೆ.
ಸಂದರ್ಶನದಲ್ಲಿ ರಣಬೀರ್ ಕಪೂರ್ ಗೆ ಪ್ರಶ್ನೆ ಮಾಡುವ ಕರೀನಾ, ‘ಫ್ಯಾಷನ್ ವಿಷಯದಲ್ಲಿ ಉರ್ಫಿ ಬಗ್ಗೆ ಏನು ಹೇಳುತ್ತೀರಿ? ಅವರ ಫ್ಯಾಷನ್ ಗೆ ನೀವು ಅಭಿಮಾನಿಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ರಣಬೀರ್ ‘ನಾನು ಅವಳ ಫ್ಯಾಷನ್ ಗೆ ಕಂಡಿತಾ ಅಭಿಮಾನಿಯಲ್ಲ. ಅಸಲಿಯಾಗಿ ಅದು ಫ್ಯಾಷನ್ ಅಲ್ಲ. ಅವಳ ಕೆಟ್ಟ ಅಭಿರುಚಿ’ ಎಂದಿದ್ದಾರೆ.
ಉರ್ಫಿ ಜಾವೇದ್ ಬಗ್ಗೆ ರಣಬೀರ್ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮಾತಿಗೆ ಉರ್ಫಿ ಯಾವ ರೀತಿಯಲ್ಲಿ ತಿರುಗೇಟು ನೀಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ತನ್ನ ತಂಟೆಗೆ ಬರುವ ಯಾರನ್ನೂ ಉರ್ಫಿ ಬಿಡುವುದಿಲ್ಲ. ಈಗಾಗಲೇ ತನ್ನ ಬಗ್ಗೆ ಕಾಮೆಂಟ್ ಮಾಡಿರುವವರಿಗೆ ಅಷ್ಟೇ ತೀವ್ರಗತಿಯಲ್ಲಿ ಉತ್ತರ ಕೊಟ್ಟಿದ್ದಾರೆ ಉರ್ಫಿ. ಇದೀಗ ಯಾವ ರೀತಿಯಲ್ಲಿ ಆ ಕಾಮೆಂಟ್ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.