ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಇತ್ತೀಚೆಗೆ ಮೊದಲ ಮಗುವನ್ನು ಭರಮಾಡಿಕೊಂಡಿದ್ದಾರೆ. ಸದ್ಯ ಮಗುವಿನ ಪಾಲನೆ ಫೋಷಣೆಯಲ್ಲಿ ತೊಡಗಿಕೊಂಡಿದ್ದು ಇದೇ ಮೊದಲ ಭಾರಿಗೆ ನಟ ರಣವೀರ್ ಸಿಂಗ್ ಸಾರ್ವಜನಿಕವಾಗಿ ಖುಷಿ ಹಂಚಿಕೊಂಡಿದ್ದಾರೆ. ಮಗು ಜನಸಿದ ಬಳಿಕ ರಣವೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಮಗುವಿನ ಆಗಮನವನ್ನು ಸಂಭ್ರಮಿಸಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ‘ತಂದೆ ಆಗಿದ್ದೇನೆ’ ಎಂದಿದ್ದಾರೆ.
ರಿಲೈನ್ಸ್ ಫೌಂಡೇಷನ್ ಹಾಗೂ ನೀತಾ ಅಂಬಾನಿ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದಾರೆ. ಪ್ಯಾರಾಒಲಂಪಿಕ್ನಲ್ಲಿ ಪದಕ ತಂದವರನ್ನು ಗೌರವಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಆದರು. ಈ ವೇಳೆ ಪಾಪರಾಜಿಗಳನ್ನು ನೋಡುತ್ತಿದ್ದಂತೆ ಎಗ್ಸೈಟ್ ಆದ ರಣವೀರ್ ತಂದೆ ಆದ ಖುಷಿಯನ್ನು ಎಲ್ಲರ ಎದುರು ವ್ಯಕ್ತಪಡಿಸಿದ್ದಾರೆ.
ಪಾಪರಾಜಿಗಳ ಕಡೆಗೆ ನಡೆದ ರಣವೀರ್ ಸಿಂಗ್ ಅವರು, ‘ನಾನು ತಂದೆ ಆಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ‘ಎಷ್ಟು ವಿನಮ್ರವಾಗಿ ನಡೆದುಕೊಂಡಿದ್ದಾರೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಈಗತಾನೇ ಅಪ್ಪ ಆದ ಖುಷಿ ನೋಡಿ’ ಎಂದು ಬರೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2018ರಲ್ಲಿ ಮದುವೆ ಆದರು. ವಿವಾಹ ಆದ ಆರು ವರ್ಷಗಳ ಬಳಿಕ ಇವರು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 8ರಂದು ಇವರ ಮದುವೆ ನಡೆದಿದೆ. ‘ಹೆಣ್ಣು ಮಗು ಜನಿಸಿದೆ. 8-9-2024’ ಎಂದು ಬರೆಯಲಾಗಿತ್ತು.