ನಾಯಿಗಳ ಮೇಲೆ ಅತ್ಯಾಚಾರವೆಸಗಿ ಅವುಗಳನ್ನು ಕೊಲ್ಲುತ್ತಿದ್ದ ವ್ಯಕ್ತಿಗೆ ನ್ಯಾಯಾಲಯವು 249 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆಸ್ಟ್ರೇಲಿಯಾದಲ್ಲಿ ಘಟನೆ ನಡೆದಿದ್ದು ಆರೋಪಿಯು ಪ್ರಾಣಿ ಶಾಸ್ತ್ರಜ್ಞ ಎಂಬುದು ವಿಪರ್ಯಾಸವಾಗಿದೆ.
ನಾಯಿಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡುತ್ತಿದ್ದ ಆರೋಪಿಯನ್ನು ಆಡಮ್ ಬ್ರಿಟನ್ ಎಂದು ಗುರುತಿಸಲಾಗಿದೆ. ಆರೋಪಿಯು 60ಕ್ಕೂ ಹೆಚ್ಚು ನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ, ಆಸ್ಟ್ರೇಲಿಯಾದ ಡಾರ್ವಿನ್ನಲ್ಲಿರುವ ಮನೆಯಲ್ಲಿ ಈ ಕೃತ್ಯವೆಸಗಿದ್ದು, ಆಡಮ್ ವಿರುದ್ಧ ನಡೆಯುತ್ತಿರುವ ಪ್ರಕರಣದ ಅಂತಿಮ ವಿಚಾರಣೆಯು ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು, ಅಂದು ಶಿಕ್ಷೆ ಅಧಿಕೃತವಾಗಿ ಪ್ರಕಟವಾಗಲಿದೆ.
ಆಡಮ್ ಅವರ ವಕೀಲರು ನ್ಯೂಯಾರ್ಕ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೈಕೆಲ್ ಗ್ರಾಂಟ್ ಅವರಿಗೆ ವರದಿಯನ್ನು ಸಲ್ಲಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಪ್ರಾಣಿ ಪ್ರೇಮಿಗಳು ನ್ಯಾಯಾಲಯದಲ್ಲಿ ಗದ್ದಲವನ್ನು ಸೃಷ್ಟಿಸಿದಾಗ, ಅವರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಲಾಯಿತು. ಆಡಮ್ಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು.
ಆಡಮ್ ತಾನು ನಾಯಿಗಳ ಮೇಲೆ ಅತ್ಯಾಚಾರ ಮಾಡಿರುವುದು ಹೌದು ಎಂದು ಒಪ್ಪಿಕೊಂಡಿದ್ದಾನೆ. ಆದರೆ ಇದೀಗ ಆತನ ಪರ ವಕೀಲರು ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಆತ ಮಾನಸಿಕವಾಗಿ ಸದೃಢನಾಗಿಲ್ಲ ಎಂದು ತಿಳಿಸಿದ್ದಾರೆ. ಆಡಮ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ, ಬಾಲ್ಯದಿಂದಲೂ ಅವರಿಗೆ ಪ್ಯಾರಾಫಿಲಿಯಾ ಎಂಬ ರೋಗವಿದೆ. ಈ ರೋಗದಿಂದ ಹೆಚ್ಚು ವರ್ಷಗಳ ಕಾಲ ಬದುಕಲು ಸಾಧ್ಯವಿಲ್ಲ ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ವಕೀಲರು ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಜನಿಸಿದ ಆರೋಪಿಯು ಲೀಡ್ಸ್ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಮಾಡಿದರು. ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡಿದರು. ಆರೋಪಿಯು ಪ್ರಾಣಿ ಹಿಂಸೆ ಹಾಗೂ ಮಕ್ಕಳ ನಿಂದನೆಯ 25ಕ್ಕೂ ಹೆಚ್ಚು ಆರೋಪಗಳನ್ನು ಎದುರಿಸುತ್ತಿದ್ದಾನೆ.