ಬೆಂಗಳೂರು:- ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ವಿರುದ್ದ ಜೂನ್ನಲ್ಲೇ ದೂರು ದಾಖಲಾಗಿತ್ತು. ಜೂನ್ನಲ್ಲಿಯೇ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರನ್ನು ಅರ್ಜಿಯಾಗಿ ಪಡೆದುಕೊಂಡಿದ್ದ ಪೊಲೀಸರು ಅರ್ಜಿ ಸಂಬಂಧ ವಿಚಾರಣೆಗೆ ಸಾಕ್ಷಿ ನೀಡುವಂತೆ ದೂರುದಾರೆಗೆ ತಿಳಿಸಿದ್ದರು. ಈ ಸಂಬಂಧ ದೂರುದಾರೆಗೆ ನೋಟಿಸ್ ನೀಡಲಾಗಿತ್ತು. ಆದ್ರೆ ದೂರುದಾರೆ ಪೊಲೀಸರ ಮುಂದೆಯೇ ಹಾಜಾರಾಗಿರಲಿಲ್ಲ. ಹೀಗಾಗಿ ಪೊಲೀಸರು ವಿಚಾರಣೆಯನ್ನು ಹಾಗೇಯೇ ಬಿಟ್ಟಿದ್ದರು. ಈಗ ಮತ್ತೆ ಅದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಕೇಸ್ ದಾಖಲು ಮಾಡಿ ಅರೆಸ್ಟ್ ಮಾಡಲಾಗಿತ್ತು. ಆದರೆ ಈ ವಿಚಾರವಾಗಿ ಕೆಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.
ಸಂತ್ರಸ್ತೆ ಈ ಹಿಂದೆ ದೂರು ಕೊಟ್ಟಿದ್ದರೂ ಆಗ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಹೀಗಾಗಿ ದೂರು ಕೊಟ್ಟರೂ ಯಾಕೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂಬ ಪ್ರಶ್ನೆ ಮೂಡಿದ.