ಇತ್ತೀಚೆಗೆ ನಟಿಯರು ಒಬ್ಬರ ಹಿಂದೊಬ್ಬರಂತೆ ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಯುವತಿಯರನ್ನು ನಟಿಯರನ್ನಾಗಿ ಮಾಡಬೇಕು ಎಂದರೆ ಡೈರೆಕ್ಟರ್, ಪ್ರೊಡ್ಯೂಸರ್… ಹೀಗೆ ಚಿತ್ರರಂಗದ ಕೆಲವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಅವರು ಮಂಚಕ್ಕೆ ಕರೆದಾಗ ಹೋಗಬೇಕು ಎಂಬ ಆರೋಪಗಳು ಕೇಳಿ ಬಂದಿದೆ.
ಇದೀಗ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ನಟಿ ರಾಖಿ ಸಾವಂತ್ ಸಿನಿಮಾ ರಂಗದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ನಿರ್ದೇಶಕರು, ನಿರ್ಮಾಪಕರ ಬಳಿ ಇರುವ ಹಲವು ಯುವತಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂದು ರಾಖಿ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂಡಸ್ಟ್ರಿಯಲ್ಲಿ ರೇಪ್ ನಡೆಯುವುದಿಲ್ಲ. ಬದಲಿಗೆ ರೇಪ್ ಮಾಡಿಸಿಕೊಳ್ಳಲು ಯುವತಿಯರು ಮುಂದೆ ಬರುತ್ತಾರೆ. ತೀರಾ ಅಸಭ್ಯ, ಅಶ್ಲೀಲ ರೀತಿಯಲ್ಲಿ ನಡೆದುಕೊಂಡು, ಮುಂದೆ ಇರುವವರನ್ನು ಉತ್ತೇಜಿಸಿ ನಂತರ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ನಿರ್ದೇಶಕರು, ನಿರ್ಮಾಪಕರನ್ನೇ ಬ್ಲ್ಯಾಕ್ಮೇಲ್ ಮಾಡುತ್ತಾರೆ. ಅವರಿಗೆ ಅಭಿನಯದ ಗಂಧಗಾಳಿಯೂ ಇರುವುದಿಲ್ಲ, ಎಬಿಸಿಡಿಯೂ ಗೊತ್ತಿರುವುದಿಲ್ಲ. ಆದರೆ ಆ ವಿಡಿಯೋ ಹಿಡಿದುಕೊಂಡು ಬ್ಲ್ಯಾಕ್ಮೇಲ್ ಮಾಡಿ, ಇದನ್ನು ನಿಮ್ಮ ಮನೆಯವರಿಗೆ ತೋರಿಸಲಾ ಅಥವಾ ನಟಿಯರನ್ನಾಗಿ ಮಾಡುತ್ತೀರಾ ಎಂದು ಬ್ಲ್ಯಾಕ್ಮೇಲ್ ಮಾಡುತ್ತಾರೆ. ಇದರಿಂದ ಬೇರೆ ದಾರಿ ಕಾಣದೇ ಅವರನ್ನು ನಟಿಯರನ್ನಾಗಿ ಮಾಡಲಾಗುತ್ತದೆ ಎಂದು ನಟಿ ಹೇಳಿದ್ದಾರೆ.
ಇದನ್ನು ನೋಡಿದ ಕೆಲವರು ಈಕೆ ದೀಪಿಕಾ ಪಡುಕೋಣೆಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರು ಯಾರನ್ನು ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಕಾಸ್ಟಿಂಗ್ ಕೌಚ್ ಎಂದು ಹಲವು ನಟಿಯರು ಹೇಳಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಖಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.