ಕೊಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನೈಟ್ ಡ್ಯೂಡಿ ಡಾಕ್ಟರ್ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯ ಕುರಿತು ಪ್ರತಿಯೊಬ್ಬರು ಆಕ್ರೋಶ ಹೊರ ಹಾಕಿದ್ದು ಆರೋಪಿಯ ರಾಕ್ಷಸ ಕೃತ್ಯಕ್ಕೆ ಹಿಡಿ ಶಾಪ ಹಾಕಿದ್ದಾರೆ. ಇದೀಗ ಕೃತ್ಯದ ಬಗ್ಗೆ ಸ್ಯಾಂಡಲ್ವಡ್ ನಟಿ ಆಶಿಕಾ ರಂಗನಾಥ್ ಆಕ್ರೋಶವನ್ನು ಹೊರಹಾಕಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಕೊಲ್ಕತ್ತಾದ ಬರ್ಬರತೆಯ ಬಗ್ಗೆ ಬರೆದುಕೊಂಡಿರುವ ನಟಿ, ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಅರ್ ಜಿ ಕರ್ ಮೆಡಿಕಲ್ ಕಾಲೇಜ್ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ದಯವಿಟ್ಟು ಅರಿತುಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ ಎಂದಿದ್ದಾರೆ.
ಕೆಲವು ನಾಯಕರು ಹೇಳುವ ಪ್ರಕಾರ ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್ ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ ತರಹದ್ದು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಕೂಡ ಆಗಬಹುದು. ಇದನ್ನೂ ಆದಷ್ಟು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಆ ಶಿಕ್ಷೆ ಇಂತಹ ಸೈಕೋಪಾತ್ಗಳಿಗೆ ದೊಡ್ಡ ಉದಾಹರಣೆಯಾಗಿ ನಿಲ್ಲಬೇಕು ಎಂದ ಆಶಿಕಾ ಹೇಳಿದ್ದಾರೆ.