ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್ನಲ್ಲಿ ಅಪರೂಪದ ಮೀನು(Mangalore) ಪತ್ತೆಯಾಗಿದೆ. ಸ್ಪಾಟೆಡ್ ಮೊರೈ ಈಲ್ಸ್ ಹೆಸರಿನ ಅಪರೂಪದ ಮೀನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿ ಕಾಣುವ ಈ ಮೀನು,
ದ್ವೀಪದ ಬಳಿಯ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಬ್ಬರದಿಂದ ತೀರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಆರೋಳಿ ಎಂದು ಕರೆಯಲ್ಪಡುವ ಈ ಮೀನನ್ನು ಸ್ಥಳೀಯರು ತಿನ್ನಲ್ಲ ಎಂದು ಮೀನುಗಾರರು ಮಾಹಿತಿ ನೀಡಿದರು.